Job Description: * ಪ್ರಸ್ತುತ ದೇಶದಲ್ಲಿನ ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕೆ ಆತ್ಮಸ್ಥೈರ್ಯ ತುಂಬಲು ಯೋಗವು ಭರವಸೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಭಿಪ್ರಾಯವನ್ನು ತಿಳಿಸಿದ್ದಾರೆ. * ಜೂನ್. 21 ಏಳನೇ ಅಂತರ ರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಕೋವಿಡ್ ಸೋಂಕಿನ ವಿರುದ್ಧ ಹೋರಾಡಲು ಕ್ರಮವಾಗಿ ಯೋಗಾಭ್ಯಾಸವನ್ನು ನಮ್ಮ ಜೇವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆಯನ್ನು ನೀಡಿದ್ದಾರೆ. * ಮೋದಿ ಜೀ ಅವರು ವಿಶ್ವ ಆರೋಗ್ಯ ಸಂಘಟನೆ (WHO) ಸಹಯೋಗದಲ್ಲಿ ಅಭಿವೃದ್ಧಿ ಪಡಿಸಿರುವ "ಎಂ-ಯೋಗ" (M - YOGA) ಅಪ್ಲಿಕೇಷನ್'ನ್ನು ಬಿಡುಗಡೆ ಮಾಡಿದರು. * ಈ ಅಪ್ಲಿಕೇಷನ್ ಯೋಗಾಭ್ಯಾಸದ ಶಿಷ್ಟಾಚಾರಕ್ಕೆ ಅನುಗುಣವಾಗಿದೆ ಮತ್ತು ವಿವಿಧ ಭಾಷೆಗಳಲ್ಲಿ ಬೇರೆ ಬೇರೆ ಯೋಗದ ಆಸನಗಳ ಬಗ್ಗೆ ವಿಡಿಯೊಗಳನ್ನು ಒಳಗೊಂಡ ವಿವರಣೆಯನ್ನು ನೀಡುತ್ತದೆ, ಹಾಗೂ ಆಧುನಿಕ ತಂತ್ರಜ್ಞಾನ ಮತ್ತು ಪ್ರಾಚೀನ ವಿಜ್ಞಾನದ ಸಮ್ಮಿಲನವಾಗಲಿದೆ ಎಂದು ತಿಳಿಸಿದ್ದಾರೆ.