Job Description: * ಪ್ರಸ್ತುತ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ದೈತ್ಯ ಕಂಪನಿಯಾಗಿರುವ ಸ್ಯಾಮ್ಸಂಗ್ ಇದೀಗ ತನ್ನ ಡಿಸ್ಪ್ಲೇ ತಯಾರಿ ಘಟಕವನ್ನು ಚೀನಾದಿಂದ ಭಾರತಕ್ಕೆ ಸ್ಥಳಾಂತರ ಮಾಡಿದೆ, ಇದೀಗ ಸ್ಯಾಮ್ಸಂಗ್'ನ ಈ ಘಟಕವು ಉತ್ತರ ಪ್ರದೇಶದ ನೊಯ್ಡಾ ಎಂಬ ನಗರದಲ್ಲಿ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದೆ ಹಾಗೂ ಸದ್ಯದಲ್ಲೇ ಉತ್ಪಾದನೆಯನ್ನು ಆರಂಭಿಸಲಿದೆ ಎಂದು ತಿಳಿದು ಬಂದಿದೆ. * ಇದೀಗ ಸ್ಯಾಮ್ಸಂಗ್'ನ ನೈಋತ್ಯ ಏಶ್ಯಾ ಅಧ್ಯಕ್ಷ ಮತ್ತು ಸಿಇಒ ಕೆನ್ ಕಾಂಗ್'ಅವರ ಸಮ್ಮುಖದ ನಿಯೋಗವು ಉತ್ತರ ಪ್ರದೇಶ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ಈ ಘಟಕದ ಬಗ್ಗೆ ಮಾತನಾಡಿದ್ದಾರೆ, ಈ ಮೊದಲು ಸ್ಯಾಮ್ಸಂಗ್'ನ ಡಿಸ್ಪ್ಲೇ ತಯಾರಿ ಘಟಕವು ಚೀನಾ ದೇಶದಲ್ಲಿ ತನ್ನ ಕಾರ್ಯಾವನ್ನು ನಡೆಸುತಿತ್ತು.