Job Description: * ಪ್ರಸ್ತುತ ಇ-ಜಾಲತಾಣ(ಕಾಮರ್ಸ್)ಗಳಲ್ಲಿ ಯಾವುದೇ ಉತ್ಪನ್ನಗಳನ್ನೂ ಫ್ಲಾಶ್ ಸೇಲ್'ನ ಅಡಿಯಲ್ಲಿ ಮಾರಾಟ ಮಾಡುವುದಕ್ಕೆ ಕೇಂದ್ರ ಸರ್ಕಾರವು ನಿಷೇಧ ಹೇರಲು ತೀರ್ಮಾನಿಸಿದೆ. * ಈ ಇ-ಕಾಮರ್ಸ್ಗಳು ಫ್ಲಾಶ್ ಸೇಲ್ ಹೆಸರಿನಲ್ಲಿ ನಕಲಿ ಕಂಪನಿಗಳು ತಯಾರಿಸಿದ ಉತ್ಪನ್ನಗಳನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿವೆ ಈ ನಿಟ್ಟಿನಲ್ಲಿ ಇದನ್ನು ತಡೆಯುವ ಉದ್ದೇಶದಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ. * ಕೇಂದ್ರ ಸರ್ಕಾರವು ಈ ಫ್ಲಾಶ್ ಸೇಲ್ ನಿರ್ಬಂಧದ ಹಾಗೂ ಎಲ್ಲ ಇ-ಕಾಮರ್ಸ್'ನ ಜಾಲತಾಣಗಳಲ್ಲಿನ ಸಾರ್ವಜನಿಕರ ಅಥವಾ ಗ್ರಾಹಕರ ಕುಂದು-ಕೊರತೆ ಬೆಗ್ಗೆ ಗಮನ ಹರಿಸಲು ಅಧಿಕಾರಿಗಳನ್ನು ನೇಮಿಸುವ ಕರಡು ಪ್ರತಿಯನ್ನು ಈ ಮೊದಲೇ ಪ್ರಕಟಿಸಿದೆ. * ಪ್ರಸ್ತುತ ಕೇಂದ್ರ ಸರ್ಕಾರವು ಸಾರ್ವಜನಿಕರ ಸಲಹೆ ಮತ್ತು ಅಭಿಪ್ರಾಯಗಳನ್ನು ಪಡೆದ ನಂತರ ಈ ನಿಷೇದ ಹೇರುವ ನಿಯಮಗಳ ಜಾರಿ ಬಗ್ಗೆ ನಿರ್ಧಾರವನ್ನು ತಗೆದುಕೊಳ್ಳಲಾಗುವದು ಎಂದು ತಿಳಿಸಿದೆ. * ಇ-ಕಾಮರ್ಸ್ ಗ್ರಾಹಕರ ಹಕ್ಕುಗಳ ಸಂರಕ್ಷಣಾ ಈ 2020 ರ ಹೊಸ ನಿಯಮಗಳನ್ನು ಪರಿಷ್ಕರಣೆ ಮಾಡಲು ನಿರ್ಧರಿಸಿದೆ, ಈ ಹಿಂದೆ ಇ-ಕಾಮರ್ಸ್ ಗ್ರಾಹಕರ ಹಕ್ಕುಗಳ ಸಂರಕ್ಷಣಾ 2020 ರ ನಿಯಮಗಳನ್ನು ಹಿಂದಿನ ವರ್ಷ ವರ್ಷ ಜುಲೈ ತಿಂಗಳಿನಲ್ಲಿ ಪ್ರಕಟಿಸಿದೆ, ಹಾಗೂ ಈ ಕೇಂದ್ರ ಸರ್ಕಾರದ ನಿಯಮಗಳನ್ನು ಉಲ್ಲಂಘಿಸುವ ಇ-ಕಾಮರ್ಸ್ ಜಾಲತಾಣಗಳಿಗೆ ದಂಡ ವಿಧಿಸಲಾಗುವದು ಎಂದು ತಿಳಿಸಿದೆ.