Job Description: * ಎಥೆನಾಲ್ ಮತ್ತು ಪೆಟ್ರೋಲ್ ಬಳಸಲು ಸಾಧ್ಯವಾಗುವ ಎಂಜಿನ್ಗಳನ್ನು ವಾಹನಗಳಲ್ಲಿ ಅಳವಡಿಸುವ ಬಗ್ಗೆ ಕೇಂದ್ರ ಸರ್ಕಾರವು 10 ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಮಾಹಿತಿಯನ್ನು ನೀಡಿದ್ದಾರೆ. * ಪ್ರಸ್ತುತ ದೇಶದಲ್ಲಿ ಪೆಟ್ರೋಲ್ ಬೆಲೆಯು ಪ್ರತಿ ಲೀಟರಿಗೆ 100 ರೂ. ಆಗಿದೆ, ಪರ್ಯಾಯ ಇಂಧನವಾಗಿರುವ ಎಥೆನಾಲ್ ಬೆಲೆಯು ಪ್ರತಿ ಲೀಟರಿಗೆ 60 ರಿಂದ 62 ರೂ. ನಷ್ಟಿದೆ ಹಾಗಾಗಿ ಎಥೆನಾಲ್ ಎಂಜಿನ್ ಬಳಸುವದರಿಂದ ಭಾರತೀಯರಿಗೆ ಪ್ರತಿ ಲೀಟರಿಗೆ 30 ರಿಂದ 35 ರೂ. ರವರೆಗೆ ಹಣ ಉಳಿತಾಯವಾಗುತ್ತದೆ ಎಂದು ತಿಳಿಸಿದ್ದಾರೆ. * ಎಂಜಿನ್'ಗೆ ಪೆಟ್ರೋಲ್ಗಿಂತ ಎಥೆನಾಲ್ ಉತ್ತಮ ಇಂಧನವಾಗಿದೆ, ಹಾಗೂ ಇದು ಕಡಿಮೆ ವೆಚ್ಚದಾಗಿದ್ದು ಮತ್ತು ಮಾಲಿನ್ಯ ಮುಕ್ತವೂ ಆಗಿದೆ ಎಂದು ತಿಳಿಸಿದ್ದಾರೆ.