Job Description: * ಪ್ರಸ್ತುತ ನ್ಯೂಜಿಲೆಂಡ್'ನ ವೇಟ್ಲಿಫ್ಟರ್ ಲೌರೆಲ್ ಹುಬಾರ್ಡ್ ಎಂಬುವರು ಸೂಪರ್ ಹೇವಿವೇಟ್ ವಿಭಾಗದಲ್ಲಿ ಒಟ್ಟಾರೆ 628 ಪೌಂಡ್ಸ್ (185ಕೆಜಿ) ಭಾರ ಎತ್ತುವ ಮೂಲಕ ಮುಂಬರಲಿರುವ ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ (ಟಿಕೆಟ್)ಯನ್ನು ಪಡೆದುಕೊಂಡಿದ್ದಾರೆ. * ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಂಡಿರುವ ಮೊದಲ ತೃತೀಯ ಲಿಂಗ್ ಸ್ಪರ್ಧಿಯಾಗಿ ಹೊರ ಹೊಮ್ಮಿದ್ದಾರೆ, ಹಾಗೂ ಇವರು ಈ ಕ್ರೀಡಾಕೂಟದಲ್ಲಿನ ಅತಿಹಿರಿಯ ವೇಟ್ಲಿಫ್ಟರ್ ಎಂದು ಕರೆಸಿಕೊಳ್ಳಲಿದ್ದಾರೆ. * ನ್ಯೂಜಿಲೆಂಡ್'ನ ವೇಟ್ಲಿಫ್ಟರ್ ಲೌರೆಲ್ ಹುಬಾರ್ಡ್ ಅವರು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ನಿಯಮದಂತೆ '8' ವರ್ಷಗಳ ಹಿಂದೆಯೇ ತೃತೀಯ ಲಿಂಗಿಗಳು ಒಲಿಂಪಿಕ್ಸ್ಗೆ ಸ್ಪರ್ಧಿಸಲು ಬೇಕಾಗಿರುವ ಅರ್ಹತೆ ಹಾಗೂ ಮಾನದಂಡಗಳನ್ನು ಪೂರೈಸಿದ್ದರು. * ಈ ಮೊದಲು 2017 ರ ವಿಶ್ವ ಚಾಂಪಿಯನ್ಷಿಪ್ನಲ್ಲಿ ಲೌರೆಲ್ ಹುಬಾರ್ಡ್ ಅವರು ಬೆಳ್ಳಿ ಪಡೆದುಕೊಂಡಿದ್ದಾರೆ, ಮತ್ತೇ 2019 ರ ಫೆಸಿಫಿಕ್ ಕ್ರೀಡಾಕೂಟದಲ್ಲಿ ಚಿನ್ನವನ್ನು ಪಡೆದುಕೊಂಡಿದ್ದರು.