Job Description: * ಸ್ವೀಡನ್ ಪ್ರಧಾನಿ ಹಾಗೂ ಸ್ವೀಡನ್ ಸೋಷಿಯಲ್ ಡೆಮಾಕ್ರಟಿಕ್ ಪಕ್ಷದ ನಾಯಕ ಸ್ಟೀಫನ್ ಲೋಫ್ವೆನ್ ಅವರು ಸಂಸತ್ನಲ್ಲಿ ವಿಶ್ವಾಸಮತ ಯಾಚನೆ ಮಾಡಿದರು ಆದರೆ ಇವರು ಈ ವಿಶ್ವಾಸಮತಯಾಚನೆಯಲ್ಲಿ ಸೋಲು ಅನುಭವಿಸಿದ್ದಾರೆ. * ದೇಶದ ಇತಿಹಾಸದಲ್ಲಿ ವಿಶ್ವಾಸಮತ ಯಾಚನೆಯಲ್ಲಿ ಅವಿಶ್ವಾಸ ಗೊತ್ತುವಳಿ ಮೂಲಕ ಪದಚ್ಯುತಗೊಂಡ ಮೊದಲ ಪ್ರಧಾನಿ ಇವರಾಗಿದ್ದಾರೆ. * ಇದೀಗ ಪ್ರಧಾನಿ ಸ್ಟೀಫನ್ ಅವರು ತಕ್ಷಣ ಚುನಾವಣೆ ಘೋಷಣೆ ಮಾಡುವದು ಅಥವಾ ಉಸ್ತುವಾರಿ ಸರ್ಕಾರದ ಮುಖ್ಯಸ್ಥರಾಗಿ ಮುಂದುವರಿಯುವದು ಈ ಎರಡು ಅವಕಾಶಗಳು ಇವರಿಗೆ ಇವೆ ಹಾಗೂ ವಿಚಾರದ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿದೆ ಎಂದು ತಿಳಿಸಿದ್ದಾರೆ. * ಸ್ಟೀಫನ್ ಲೋಫ್ವೆನ್ ಈ ಹಿಂದೆ 2018ರಲ್ಲಿ 2ನೇ ಬಾರಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.