Job Description: 2020 ರ ಬೇಸಿಗೆ ಒಲಿಂಪಿಕ್ಸ್ ಕ್ರೀಡಾಕೂಟದ ಮಹಿಳೆಯರ +87 ಕೆಜಿ ವಿಭಾಗದ ವೇಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಸ್ಪರ್ಧಿಸಲು ನ್ಯೂಜಿಲೆಂಡ್ ಒಲಿಂಪಿಕ್ ಸಮಿತಿಯು ವೇಟ್ಲಿಫ್ಟರ್ ಲಾರೆಲ್ ಹಬಾರ್ಡ್ ಅವರನ್ನು ಆಯ್ಕೆ ಮಾಡಿದೆ. ಈ ಮೂಲಕ ಲಿಂಗ ಪರಿವರ್ತನೆಯ ಬಳಿಕ ಒಲಿಂಪಿಕ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ ಮೊದಲ ಲಿಂಗ ಪರಿವರ್ತಿತ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. * 43 ವರ್ಷದ ಇವರು ಈ ಮೊದಲು ಅಂದರೆ 2013 ರಲ್ಲಿ ಲಿಂಗ ಪರಿವರ್ತನೆಗೂ ಮೊದಲು ಪುರುಷರ ವೇಟ್ಲಿಫ್ಟಿಂಗ್ ಸ್ಪರ್ಧೆಗಳಲ್ಲಿ ಸ್ಪರ್ಧಿಸಿದ್ದರು.