Job Description: ಇತ್ತೀಚಿಗೆ ಹೃದ್ರೋಗ ತಜ್ಞ ದೇವಿ ಪ್ರಸಾದ್ ಶೆಟ್ಟಿ ನೇತೃತ್ವದ 13 ಸದಸ್ಯರ ತಜ್ಞರ ಸಮಿತಿಯು 6-14 ವರ್ಷ ವಯಸ್ಸಿನ ಮಕ್ಕಳಲ್ಲಿ COVID-19 ಸೋಂಕನ್ನು ಪತ್ತೆಹಚ್ಚಲು ಗಂಟಲಿನ ಗಾರ್ಗ್ಲ್ ಮಾದರಿಗಳನ್ನು ಬಳಸಬಹುದು ಎಂದು ಶಿಫಾರಸ್ಸು ಮಾಡಿದೆ. ಮುಖ್ಯ ಅಂಶಗಳು : * ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ನಡೆಸಿದ ಅಧ್ಯಯನದ ಪ್ರಕಾರ SARS-CoV-2 ವೈರಸ್ ಅನ್ನು ಪತ್ತೆಹಚ್ಚಲು ಗಂಟಲಿನ ಗಾರ್ಗ್ಲ್ ಮಾದರಿಗಳ ಬಳಕೆಯು ಒಂದು ಒಂದು ಪರ್ಯಾಯ ವಿಧಾನವಾಗಿದೆ ಎಂದು ತಿಳಿಸಿದೆ. * ಈ ಸಮತಿಯ ಒಂದು ಅಂದಾಜಿನ ಪ್ರಕಾರ, 18 ವರ್ಷ ವಯಸ್ಸಿನ ಸುಮಾರು 3.4 ಲಕ್ಷ ಮಕ್ಕಳು ದೇಶದಲ್ಲಿ ಮೂರನೇ ಅಲೆಯ ಸೋಂಕಿಗೆ ತುತ್ತಾಗುವ ಸಾಧ್ಯತೆಯಿದೆ. * ಸಮಿತಿಯ ಹಲವು ಶಿಫಾರಸುಗಳು - ಮೂರನೇ ಅಲೆಯಲ್ಲಿ ಆಸ್ಪತ್ರೆಗಳಲ್ಲಿ ಗರಿಷ್ಠ ಮಟ್ಟದಲ್ಲಿ ಮಕ್ಕಳ ಹಾಸಿಗೆಗಳ ಲಭ್ಯತೆಗೆ ಅನುವು - ಸೋಂಕಿತ ಮಕ್ಕಳಿಗೆ ಚಿಕಿತ್ಸೆಗಾಗಿ ಸುಮಾರು 6,801 ಐಸಿಯು ಮತ್ತು 43,358 ಕೋವಿಡ್ ಕೇರ್ ಸೆಂಟರ್ ಗಳ ಅವಶ್ಯ