Job Description: * ಮುಂದಿನ 5ವರ್ಷಗಳ ಕಾಲ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಆಂಟೋನಿಯೊ ಗುಟೆರೆಸ್ ಮರು ಆಯ್ಕೆಯಾಗಿದ್ದಾರೆ. * ಆಂಟೋನಿಯೊ ಗುಟೆರೆಸ್ ಅವರನ್ನು 193 ಸದಸ್ಯ ರಾಷ್ಟ್ರಗಳ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಆಯ್ಕೆಮಾಡಲಾಗಿದೆ. * ಆಂಟೋನಿಯೊ ಗುಟೆರೆಸ್ ಅವರನ್ನು ಭದ್ರತಾ ಮಂಡಳಿಯು ವಿಶ್ವಸಂಸ್ಥೆಯ 2 ನೇ ಅವಧಿಗೆ ಶಿಫಾರಸ್ತುಮಾಡಿದೆ. * 2017 ರ ಜನವರಿ 1 ರಂದು ಆಂಟೋನಿಯೊ ಗುಟೆರೆಸ್ ಅವರು ವಿಶ್ವಸಂಸ್ಥೆಯ 9 ನೇ ಪ್ರಧಾನ ಕಾರ್ಯದರ್ಶಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದರು, ಪ್ರಸ್ತುತ ಇವರ ಮೊದಲ ಅಧಿಕಾರವಧಿಯು ಮುಂಬರುವ ಡಿಸೆಂಬರ್. 31 ರಂದು ಕೊನೆಗೊಳ್ಳಲಿದೆ, ನಂತರ ಇವರ 2 ನೇ ಅವಧಿಯು 2022 ರ ಜನವರಿ 1ರಿಂದ ಪ್ರಾರಂಭವಾಗಲಿದೆ. * 72 ವರ್ಷ ವಯಸ್ಸಿನ ಆಂಟೋನಿಯೊ ಗುಟೆರೆಸ್ ಅವರು ಈ ಮೊದಲು 1995 ರಿಂದ 2002 ರ ವರೆಗೆ ಪೋರ್ಚುಗಲ್ನ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ, ಮತ್ತೇ 2005 ರಿಂದ 2015 ರ ವರೆಗೆ ವಿಶ್ವಸಂಸ್ಥೆಯಲ್ಲಿ ನಿರಾಶ್ರಿತರ ಹೈಕಮಿಷನರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.