Job Description: * ಫ್ಲೈಯಿಂಗ್ ಸಿಖ್ ಎಂದೇ ಪ್ರಖ್ಯಾತಿ ಪಡೆದಿರುವ ಭಾರತದ ಖ್ಯಾತ ಅಥ್ಲೆಟಿಕ್ ಮಿಲ್ಖಾ ಸಿಂಗ್ ಅವರು ಅನಾರೋಗ್ಯದ ಕಾರಣದಿಂದಾಗಿ ವಿಧಿವಶರಾಗಿದ್ದಾರೆ. * ಪ್ರಸ್ತುತ ಮಿಲ್ಖಾ ಸಿಂಗ್ ಅವರು1935 ರಲ್ಲಿ ಈಗಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯಕ್ಕೆ ಸೇರಿರುವ ಗೋವಿಂದಪುರದಲ್ಲಿ ಜನಿಸಿದ್ದರು, ನಂತರ ಪಾಕಿಸ್ತಾನವು ಭಾರತದಿಂದ ವಿಭಜನೆಯಾಗುವ ಸಂಧರ್ಭದಲ್ಲಿ ನಡೆದ ಕೋಮು ಗಲಭೆಯಲ್ಲಿ 12 ನೇ ವಯಸ್ಸಿನ ಮಿಲ್ಖಾ ಸಿಂಗ್ ಅವರು ತಂದೆ ತಾಯಿಯನ್ನು ಕಳೆದುಕೊಂಡರು. * 1958 ರಲ್ಲಿ ಮಿಲ್ಖಾ ಸಿಂಗ್ ಅವರು ಏಷ್ಯನ್ ಕ್ರೀಡಾಕೂಟದಲ್ಲಿ 200 ಮೀ. ಹಾಗೂ 400 ಮೀ. ಓಟದಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದರು, ನಂತರ 1958 ರ ಕಾಮನ್ ವೆಲ್ತ್ನಲ್ಲಿಯು ಕೂಡ ಚಿನ್ನದ ಪದಕ ಜಯಿಸಿದ್ದಾರೆ, ಇವರ ಈ ಪದಕವು ಭಾರತಕ್ಕೆ ಕಾಮನ್ವೆಲ್ತ್ನಲ್ಲಿ ಬಂದಿರುವ ಮೊಟ್ಟ ಮೊದಲ ಚಿನ್ನದ ಪದಕವಾಗಿತ್ತು, ಇದೇ ಸಮಯದಲ್ಲಿ ಭಾರತ ಸರ್ಕಾರವು ಇವರ ಈ ಸಾಧನೆಗೆ ಪದ್ಮಶ್ರೀ ನೀಡಿ ಗೌರವಿಸಿತ್ತು. * ಪ್ರಸ್ತುತ ಭಾರತದ ಮಹಿಳಾ ವಾಲಿಬಾಲ್ ತಂಡದ ಮಾಜಿ ನಾಯಕಿ ಹಾಗೂ ಭಾರತದ ಅಥ್ಲೀಟ್ ಮಿಲ್ಖಾ ಸಿಂಗ್ ಅವರ ಧರ್ಮ ಪತ್ನಿ ಯಾಗಿದ್ದ ನಿರ್ಮಲಾ ಕೌರ್ ಅವರು ತಮ್ಮ 85 ನೇ ವಯಸ್ಸಿನಲ್ಲಿ ಕೋವಿಡ್ -19ಗೆ ಬಲಿಯಾಗಿದ್ದಾರೆ.