Job Description: * ಗೂಗಲ್ ಕಂಪನಿಯು ಭಾರತದ ಗ್ರಾಮೀಣ ಭಾಗಗಳಲ್ಲಿ 80 ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಾಪನೆ ಇದರ ಜೊತೆಗೆ ಆರೋಗ್ಯ ಕಾರ್ಯಕರ್ತರ ಕೌಶಲ ಅಭಿವೃದ್ಧಿಗಾಗಿ 113 ಕೋಟಿ ರೂ. ದೇಣಿಗೆ ನೀಡುವುದಾಗಿ ತಿಳಿಸಿದೆ. * ಗೂಗಲ್ ಕಂಪನಿಯು ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಾಪನೆ ಮಾಡಲು"ಗೀವ್ ಇಂಡಿಯಾ" ಸಂಸ್ಥೆಗೆ 90 ಕೋಟಿ ರೂ. ಹಾಗೂ "ಪಾಥ್" ಸಂಸ್ಥೆಗೆ 18.5 ಕೋಟಿ ರೂ. ದೇಣಿಗೆ ನೀಡಲಾಗುತ್ತದೆ ಎಂದು ತಿಳಿಸಿದೆ, ಇದರ ಜೊತೆಗೆ ಸುಮಾರು 20,000 ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್-19 ನಿರ್ವಹಣೆಯ ವಿಶೇಷ ತರಬೇತಿ ನೀಡಲು ಹಾಗೂ ಗ್ರಾಮೀಣ ಆರೋಗ್ಯ ವ್ಯವಸ್ಥೆಗಳನ್ನು ಉತ್ತಮಗೊಳಿಸಲು ಅಪೋಲೊ ಮೆಡ್ಸ್ಕಿಲ್ಸ್ಗೆ ಗೂಗಲ್ ನೆರವು ನೀಡುವದಾಗಿ ತಿಳಿಸಿದೆ. * ಗೂಗಲ್ ಕಂಪನಿ ಭಾರತದಲ್ಲಿನ 15 ರಾಜ್ಯಗಳ ಸುಮಾರು 1,80,000 ಆಶಾ ಕಾರ್ಯಕರ್ತೆಯರು ಹಾಗೂ 40,000 ಎಎನ್ಎಂ ಕಾರ್ಯಕರ್ತರಿಗೆ ಕೌಶಲ ಕಾರ್ಯಕ್ರಮಗಳನ್ನು ನಡೆಸಲು ಅರ್ಮಾನ್ ಸಂಸ್ಥೆಗೆ 3.6 ಕೋಟಿ ರೂ. ಹಣಕಾಸಿನ ನೆರವು ನೀಡಲಾಗುತ್ತದೆ ಎಂದು ತಿಳಿಸಿದೆ. * ಗೂಗಲ್ ಸಂಸ್ಥೆಯು ಈ ಹಿಂದೆ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸಲು 135 ಕೋಟಿ ರೂ. ನೆರವು ನೀಡುವುದಾಗಿ ಏಪ್ರಿಲ್'ನಲ್ಲೇ ಘೋಷಣೆ ಮಾಡಿತ್ತು, ಇದರ ಅಂಗವಾಗಿ ಕೋವಿಡ್-19 ಪರಿಸ್ಥಿತಿಯಿಂದಾಗಿ ಕಷ್ಟ ಅನುಭವಿಸುತ್ತಿರುವ ಬಡ ಕುಟುಂಬಗಳಿಗೆ ಅನುಕೂಲವಾಗಲು "ಗೀವ್ಇಂಡಿಯಾ" ಮತ್ತು ಯುನಿಸೆಫ್'ಗೆ 20 ಕೋಟಿ ರೂ. ನೀಡಲಾಗಿದೆ ಎಂಬ ಮಾಹಿತಿಯನ್ನು ತಿಳಿಸಿದೆ.