Job Description: * ಭಾರತೀಯ ಮೂಲದ ನೀರು ತಜ್ಞೆ ರಾಧಿಕಾ ಫಾಕ್ಸ್ ಅವರು ಅಮೇರಿಕದ ಪರಿಸರ ಸಂರಕ್ಷಣಾ ಏಜನ್ಸಿಯ(EPA) ನೀರು ವಿಭಾಗದ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. * ಈ ಭಾರತೀಯ ಮೂಲದ ರಾಧಿಕಾ ಫಾಕ್ಸ್ ಆಯ್ಕೆಗೆ ಸೆನೆಟ್ನಲ್ಲಿ ಚುನಾವಣೆಯನ್ನು ನಡೆಸಲಾಯಿತು, ಈ ಚುನಾವಣೆಯಲ್ಲಿ ರಾಧಿಕಾ ಫಾಕ್ಸ್ ಅವರು 55 ಸದಸ್ಯರಲ್ಲಿ 43 ಸದಸ್ಯರ ಬೆಂಬಲ ಪಡೆದು ಬಹುಮತವನ್ನು ಪಡೆದುಕೊಂಡು ಆಯ್ಕೆಯಾದರು. * ರಾಧಿಕಾ ಫಾಕ್ಸ್ ಅವರು 2 ದಶಕಗಳವರೆಗೆ ಸೇವೆಯನ್ನು ಸಲ್ಲಿಸಿದ್ದಾರೆ, ಆ ಸೇವಾ ಅವಧಿಯಲ್ಲಿ ರಾಧಿಕಾ ಅವರು ಅಲ್ಲಿನ ಸ್ಥಳೀಯ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ, ಈ ಕಾರಣದಿಂದಾಗಿ ರಾಧಿಕಾ ಫಾಕ್ಸ್ ಅವರನ್ನು EPA ಮುಖ್ಯಸ್ಥ ಸ್ಥಾನಕ್ಕೆ ನೇಮಕ ಮಾಡಲಾಗಿದೆ ಎಂದು ತಿಳಿದು ಬಂದಿದೆ.