Job Description: * ಭಾರತ ದೇಶವು ಶ್ರೀಲಂಕಾ ರಾಷ್ಟ್ರದ ಸೌರಶಕ್ತಿ ಯೋಜನೆಗೆ 100 ಮಿಲಿಯನ್ ಡಾಲರ್ ನೆರವು ನೀಡಲು ನಿರ್ಧರಿಸಿದೆ, ಪ್ರಸ್ತುತ ಶ್ರೀಲಂಕಾದಲ್ಲಿ 2030 ರೊಳಗೆ ಶೇ.70 ರಷ್ಟು ನವೀಕರಿಸಬಹುದಾದ ಇಂಧನವನ್ನು ಸದುಪಯೋಗ ಮಾಡಿಕೊಂಡು ಸೌರಶಕ್ತಿ ಬಳಕೆಯಲ್ಲಿ ಸಾಧನೆ ಮಾಡಲು ಮುಂದಾಗಿದೆ ಇದರಿಂದಾಗಿ ಭಾರತವು ಶ್ರೀಲಂಕಾಕ್ಕೆ 100 ಮಿಲಿಯನ್ ಅಮೆರಿಕನ್ ಡಾಲರ್ ನೆರವು ನೀಡಲು ನಿರ್ಧರಿಸಿದೆ. * ಶ್ರೀಲಂಕಾ ಸರ್ಕಾರ ಮತ್ತು ಭಾರತೀಯ ಎಕ್ಸ್ಪೋರ್ಟ್ ಮತ್ತು ಇಂಪೋರ್ಟ್ ಸಂಸ್ಥೆಗಳು ಭಾರತೀಯ ಹೈ ಕಮಿಷನರ್ ಕಚೇರಿಯಲ್ಲಿ ಈ ಒಪ್ಪಂದದ ಒಡಂಬಡಿಕೆಗೆ ಸಹಿ ಹಾಕಿವೆ. * ಭಾರತದ ಈ 100 ಮಿಲಿಯನ್ ಅಮೆರಿಕನ್ ಡಾಲರ್'ನ್ನು ಶ್ರೀಲಂಕಾದ ಸೌರಶಕ್ತಿ ಉತ್ಪಾದನೆಯಲ್ಲಿ ಪ್ರಗತಿ ಸಾಧಿಸುವ ಯೋಜನೆಗಳಿಗೆ ಬಳಕೆ ಮಾಡಲಾಗುತ್ತದೆ ಎಂದು ಶ್ರೀಲಂಕಾ ಅಧ್ಯಕ್ಷ ಗೊಟಾಬಯಾ ರಾಜಪಕ್ಷೆ ಟ್ವಿಟ್ ಮೂಲಕ ತಿಳಿಸಿದ್ದಾರೆ. * ಪ್ರಸ್ತುತ ಭಾರತ ಸೇರಿ 89 ರಾಷ್ಟ್ರಗಳು ಸೌರಶಕ್ತಿ ಸದ್ಬಳಕೆಗಾಗಿ ರಚನೆಯಾಗಿರುವ ಅಂತಾರಾಷ್ಟ್ರೀಯ ಸೋಲಾರ್ ಒಕ್ಕೂಟದಲ್ಲಿ ಸದಸ್ಯ ರಾಷ್ಟ್ರಗಳಾಗಿವೆ.