Job Description: * ಪ್ರಸ್ತುತ ಕೇಂದ್ರ ಸರ್ಕಾರವು ಚಿನ್ನದ ಆಭರಣಗಳು ಮತ್ತು ವಸ್ತುಗಳ ಮೇಲೆ ಹಾಲ್ ಮಾರ್ಕ್'ನ್ನು ಕಡ್ಡಾಯಗೊಳಿಸಿ ಎಂದು ಆದೇಶ ಹೊರಡಿಸಿದೆ. * ಪ್ರಸ್ತುತ ಮಳಿಗೆಗಳಲ್ಲಿ ಆಭರಣಗಳನ್ನು ಖರೀದಿ ಮಾಡುವಾಗ ಅವುಗಳಿಗೆ ಹಾಲ್ ಮಾರ್ಕ್ ಇದ್ದರೆ ನಂಬಿಕೆ ಮತ್ತು ವಿಶ್ವಾಸ ಹೆಚ್ಚುತ್ತದೆ ಹಾಗೂ ಹಾಲ್ ಮಾರ್ಕ್ ಇರುವ ಚಿನ್ನ ಶುದ್ಧವಾಗಿದ್ದು ಭಾರತದ ಎಲ್ಲಿ ಬೇಕಾದರೂ ಗ್ರಾಹಕರು ಖರೀದಿಸಬಹುದು ಎಂದು ತಿಳಿಸಿದ್ದಾರೆ. * ಭಾರತದ ಚಿನ್ನ ಮತ್ತು ಜ್ಯುವೆಲ್ಲರಿ ಒಕ್ಕೂಟದ ಮುಂಬೈ ಶಾಖೆಯ ಮುಖ್ಯಸ್ಥ ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸುತ್ತೇವೆ ಎಂದು ತಿಳಿಸಿದ್ದಾರೆ. * ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಸ್'ನ ಡಿಜಿ ಪ್ರಮೋದ್ ಕುಮಾರ್ ತಿವಾರಿ ಅವರು ಪ್ರಸ್ತುತ ಹಾಲ್ ಮಾರ್ಕ್ ಇಲ್ಲದ ಚಿನ್ನದ ಆಭರಣಗಳನ್ನು ಅಂಗಡಿಗಳು ಅಥವಾ ಮಳಿಗೆಗಳಲ್ಲಿ ಮಾರಾಟ ಮಾಡಲು ಇನ್ನೂ ಅವಕಾಶ ಇದೇ, ಈ ಆಭರಣಗಳನ್ನು ಖರೀದಿಸಿದವರು ಅದಕ್ಕೆ ಹಾಲ್ ಮಾರ್ಕ್ ಹಾಕಿಸಿ ಹೊಸ ಜ್ಯುವೆಲ್ಲರಿಯಾಗಿ ಮಾಡಿ ಗುಣಮಟ್ಟ ಕಾಪಾಡಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ.