Job Description: * ಚೀನಾ ದೇಶವು ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸಾಧಿಸಲು ಹೊಸ ಬಾಹ್ಯಾಕಾಶ ನಿಲ್ದಾಣಕ್ಕೆ 3 ಪುರುಷ ಗಗನಯಾತ್ರಿಗಳನ್ನು ಕಳುಹಿಸಲು ಚೀನಾದ ಮ್ಯಾನ್ಡ್ ಸ್ಪೇಸ್ ಏಜೆನ್ಸಿ ಮಾಹಿತಿ ನೀಡಿದೆ. * ಚೀನಾ ದೇಶದ ನಿಯೆ ಹೈಶೆಂಗ್, ಲಿಯು ಬೊಮಿಂಗ್ ಮತ್ತು ಟ್ಯಾಂಗ್ ಹಾಂಗ್ಬೊ ಎಂಬ 3 ಗಗನಯಾತ್ರಿಗಳನ್ನು ಹೊತ್ತು ಶೆನ್ಶಾವ್-12 ಆಕಾಶನೌಕೆ ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಿದ್ದಾರೆ, ಹಾಗೂ ಆ 3 ಗಗನ ಯಾತ್ರಿಗಳು 3 ತಿಂಗಳ ಕಾಲ ಹೊಸ ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿದುಕೊಳ್ಳಲಿದ್ದಾರೆ ಎಂದು ಸಿಎಮ್ಎಸ್ಎ ನಿರ್ದೇಶಕ ಜಿ ಕಿಮಿಂಗ್ ಉಡಾವಣಾ ಕೇಂದ್ರದಲ್ಲಿ ನಡೆಸಿದ ಸುದ್ದಿವಾಹಿನಿಯಲ್ಲಿ ಮಾಹಿತಿಯನ್ನು ನೀಡಿದ್ದಾರೆ, ಹಾಗೂ ಇದೇ ಮೊದಲ ಮಾನವಸಹಿತ ಕಾರ್ಯಾಚರಣೆಯಾಗಿದೆ ಎಂದಿದ್ದಾರೆ. * ಪ್ರಸ್ತುತ ಚೀನಾ ದೇಶದ ಆಡಳಿತದಲ್ಲಿರುವ ಚೀನಾ ಕಮ್ಯನಿಸ್ಟ್ ಪಾರ್ಟಿಗೆ ಸದ್ಯದಲ್ಲೇ 100 ವರ್ಷಗಳು ತುಂಬುತ್ತಿವೆ ಹಿನ್ನೆಲೆಯಲ್ಲಿ ಚೀನಾ ಈ ಬಾಹ್ಯಾಕಾಶ ಯೋಜನೆಯನ್ನು ಕೈಗೊಂಡಿದೆ.