Job Description: * ಭಾರತೀಯ -ಅಮೆರಿಕನ್ ಸರಳಾ ವಿದ್ಯಾ ನಗಲಾ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಕನೆಕ್ಟಿಕಟ್ನ ಫೆಡರಲ್ ನ್ಯಾಯಾಧೀಶರನ್ನಾಗಿ ನಾಮನಿರ್ದೇಶನ ಮಾಡಿದ್ದಾರೆ. * ಅಮೆರಿಕ ಜಿಲ್ಲಾ ನ್ಯಾಯಾಲಯದಲ್ಲಿ ಕಾರ್ಯವನ್ನು ನಿರ್ವಹಿಸಲಿರುವ ದಕ್ಷಿಣ ಏಷ್ಯಾ ಮೂಲದ ಸರಳಾ ವಿದ್ಯಾ ಅವರು ಮೊದಲ ವ್ಯಕ್ತಿಯಾಗಲಿದ್ದಾರೆ. * ಸರಳಾ ವಿದ್ಯಾ ಅವರು ಈ ಹಿಂದೆ 2012 ರಲ್ಲಿ ಅಮೆರಿಕದ ಅಟಾರ್ನಿ ಕಚೇರಿಗೆ ಸೇರ್ಪಡೆಯಾಗಿದ್ದಾರೆ. * ಪ್ರಸ್ತುತ ಭಾರತೀಯ -ಅಮೆರಿಕನ್ ಸರಳಾ ವಿದ್ಯಾ ನಗಲಾ ಅವರು ಕನೆಕ್ಟಿಕಟ್ನಲ್ಲಿರುವ ಅಟಾರ್ನಿ ಕಚೇರಿಯಲ್ಲಿ ಅಪರಾಧ ವಿಭಾಗದ ಉಪ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.