Job Description: * ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ಕಳೆದ ಒಂದು ವರ್ಷದ ಹಿಂದೆ ಲಡಾಖ್`ನ ಗಾಲ್ವಾನ್ ಕಣಿವೆಯಲ್ಲಿ ಘರ್ಷಣೆ ನಡೆದು ಹೋಗಿದೆ, ಇದೀಗ ಈ ಘರ್ಷಣೆ ನಡೆದ ಬಳಿಕ ಭಾರತೀಯರು ಶೇಕಡಾ 43 ರಷ್ಟು ಚೀನಾ ತಯಾರಿಸಿದ ಉತ್ಪನ್ನಗಳನ್ನು ಖರೀದಿ ಮಾಡಿಲ್ಲ ಎಂದು ಸಮೀಕ್ಷೆಯೊಂದು ಮಾಹಿತಿಯನ್ನು ವರದಿ ಮಾಡಿದೆ. * ಭಾರತ-ಚೀನಾ ನಡುವಿನ ಗಡಿ ವಿವಾದದಿಂದಾಗಿ ಶೇಕಡಾ 40 ಕ್ಕೂ ಹೆಚ್ಚು ಭಾರತೀಯ ಗ್ರಾಹಕರು ಮೇಡ್ ಇನ್ ಚೀನಾ ವಸ್ತುಗಳನ್ನು ಖರೀದಿಸಲು ಹಿಂದೆ ಸರಿದಿದ್ದಾರೆ ಎಂದು ತಳಿದು ಬಂದಿದೆ. * ಭಾರತದ 281 ಜಿಲ್ಲೆಗಳಿಂದ ಸುಮಾರು 18,000 ಜನಗಳ ಅಭಿಪ್ರಾಯವನ್ನು ಲೋಕಲ್ಸರ್ಕಲ್ಸ್ನಿಂದ ಸಂಗ್ರಹಿಸಲಾಗಿದೆ, ಈ ಮಾಹಿತಿಯ ಪ್ರಕಾರ ಕಳೆದ 1 ವರ್ಷದಲ್ಲಿ ಶೇ. 43 ರಷ್ಟು ಭಾರತೀಯ ಗ್ರಾಹಕ ಪ್ರಜೆಗಳು ಚೀನಾ ದೇಶ ತಯಾರಿಸಿದ ವಸ್ತುಗಳನ್ನು ಖರೀದಿ ಮಾಡಿಲ್ಲ ಎಂದು ತಿಳಿಸಿದ್ದಾರೆ. * ಆದರೆ ಶೇಕಡಾ 34 ರಷ್ಟು ಜನರು ಒಂದು ಅಥವಾ ಎರಡು ಚೀನಾ ವಸ್ತುಗಳನ್ನು ಖರೀದಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ, ಇನ್ನು ಶೇಕಡಾ 14 ರಷ್ಟು ಜನರು 3- 5 ವಸ್ತುಗಳು, ಹಾಗೂ ಶೇಕಡಾ 7 ರಷ್ಟು ಜನರು 5 -10 ವಸ್ತುಗಳನ್ನು ಖರೀದಿಸಿದ್ದಾರೆ ಎಂದು ತಿಳಿದು ಬಂದಿದೆ.