Job Description: * GI ಪ್ರಮಾಣೀಕರಿಸಿದ "ಜರ್ದಲು" ಮಾವಿನ ಹಣ್ಣಿನ ಮೊದಲ ವಾಣಿಜ್ಯ ಸರಕನ್ನು ಬಿಹಾರ್ ರಾಜ್ಯದಿಂದ ಯುನೈಟೆಡ್ ಕಿಂಗ್ಡಮ್ಗೆ ರಫ್ತು ಮಾಡಿದೆ. * 2018 ರಲ್ಲಿ ಬಿಹಾರ್ ರಾಜ್ಯದ ಭಾಗಲ್ಪುರ್ ಜಿಲ್ಲೆಯ ಈ ಜರ್ದಲು ಮಾವುಗಳಿಗೆ GI ಪ್ರಮಾಣೀಕರಣ ನೀಡಲಾಗಿದೆ. * ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವು, ಬಿಹಾರ ರಾಜ್ಯ ಸರ್ಕಾರವು ಭಾರತೀಯ ಹೈಕಮಿಷನ್ ಮತ್ತು ಇನ್ವೆಸ್ಟ್ ಇಂಡಿಯಾ ಸಹಯೋಗದೊಂದಿಗೆ ಜರ್ದಲು ಮಾವಿನಹಣ್ಣಗಳನ್ನೂ ರಫ್ತು ಮಾಡಿದೆ. * ಪ್ರಸ್ತುತ ಮಾವಿನ ರಫ್ತು ಹೆಚ್ಚಿಸುವ ಉದ್ದೇಶದಿಂದ ವರ್ಚುವಲ್ ಖರೀದಿದಾರ ಹಾಗೂ ಮಾರಾಟಗಾರರ ಸಭೆ ಮತ್ತು ಉತ್ಸವವನ್ನು ಭಾರತೀಯ ರಾಯಭಾರ ಕಚೇರಿಗಳ ಸಹಯೋಗದೊಂದಿಗೆ ಬರ್ಲಿನ್, ಜರ್ಮನಿ ಮತ್ತು ಜಪಾನ್ನಲ್ಲಿ ಮಾವಿನ ಉತ್ಸವವನ್ನು ನಡೆಸುತ್ತಿದೆ. * ಇತ್ತೀಚಿಗೆ ಭಾರತೀಯ ಮಾವಿನ ಹಣ್ಣಿನ ಪ್ರಚಾರ ಕಾರ್ಯಕ್ರಮವನ್ನು ಒಂದು ವಾರದವರೆಗೆ ಬಹ್ರೇನ್ನಲ್ಲಿ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ 3 GI ಪ್ರಮಾಣೀಕೃತ ಪ್ರಭೇದಗಳಾಗಿರುವ ಪಶ್ಚಿಮ ಬಂಗಾಳದ ಖಿರ್ಸಪತಿ ಮತ್ತು ಲಕ್ಷ್ಮನ್ಭೋಗ್, ಹಾಗೂ ಬಿಹಾರದಿಂದ ಜರ್ದಲು ಒಟ್ಟಾರೆ 16 ವಿಧದ ಮಾವಿನ ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. * ಭಾರತದಲ್ಲಿ ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ಪ್ರಸ್ತುತ ಉತ್ತರಪ್ರದೇಶ, ಬಿಹಾರ, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ಈ ಎಲ್ಲ ರಾಜ್ಯಗಳಲ್ಲಿ ಅತೀ ಹೆಚ್ಚಾಗಿ ಮಾವಿನ ಹಣ್ಣನ್ನು ಬೆಳೆಯುತ್ತಾರೆ.