Job Description: * 2021 ರ ಅಂತ್ಯದ ವೇಳೆಗೆ ವಿಶ್ವದ ಮೊದಲ ಮರದ ಉಪಗ್ರಹವನ್ನು WISA ವುಡ್ಸಾಟ್(Woodsat) ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯು ಭೂಮಿಯ ಕಕ್ಷೆಯಲ್ಲಿ ಉಡಾವಣೆ ಮಾಡಲಿದೆ. * ಈ ಮರದ ಉಪಗ್ರಹವನ್ನು ಫಿನ್ಲ್ಯಾಂಡ್'ನಲ್ಲಿ ವಿನ್ಯಾಸಗೊಳಿಸಲಾಗಿದೆ, ಬಾಹ್ಯಾಕಾಶ ನೌಕೆ ರಚನೆಗಳಲ್ಲಿ ಪ್ಲೈವುಡ್'ನಂತಹ ಮರದ ವಸ್ತುಗಳನ್ನು ಪರೀಕ್ಷಿಸಲು ಪ್ರಾರಂಭಿಸಲಾಗುವುದು, ಈ ಮರದ ಉಪಗ್ರಹವನ್ನು 2021 ರ ಅಂತ್ಯದ ವೇಳೆಗೆ ರಾಕೆಟ್ ಲ್ಯಾಬ್ ಎಲೆಕ್ಟ್ರಾನ್ ರಾಕೆಟ್ನೊಂದಿಗೆ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಾಗುವದು ಈ ಉಪಗ್ರಹವನ್ನು ನ್ಯೂಜಿಲೆಂಡ್'ನ ಮಹಿಯಾ ಪೆನಿನ್ಸುಲಾ ಉಡಾವಣಾ ಸಂಕೀರ್ಣದಿಂದ ಬಿಡುಗಡೆ ಮಾಡಲಾಗುವುದು. * ಈ ಉಪಗ್ರಹವು ಸರಿ ಸುಮಾರು 500-600 ಕೀ.ಮೀ. ಎತ್ತರದಲ್ಲಿ ಪರಿಭ್ರಮಿಸುತ್ತದೆ ಹಾಗೂ ಇದು 10x10x10 cm ನ್ಯಾನೋ ಉಪಗ್ರಹವಾಗಿದೆ. ಈ ಉಪಗ್ರಹವು ಪ್ಲೈವುಡ್'ನ ಫಲಕಗಳನ್ನು ಬಳಸಿ ನಿರ್ಮಾಣ ಮಾಡಲಾಗಿದೆ.