Job Description: * ಮಧ್ಯಪ್ರದೇಶ ರಾಜ್ಯವು ಕೋವಿಡ್ -19 ಸಾಂಕ್ರಾಮಿಕ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಯುವ ಶಕ್ತಿ ಕರೋನಾ ಮುಕ್ತ ಅಭಿಯಾನ’ ಪ್ರಾರಂಭಿಸಲಿದೆ. * ಮಧ್ಯಪ್ರದೇಶ ರಾಜ್ಯದ ಯುವ ಶಕ್ತಿ ಕರೋನಾ ಮುಕ್ತ ಅಭಿಯಾನ, ಎಂದರೆ ಯುವ ಜನಗಳ ಸಹಾಯದಿಂದ ಕರೋನಾ ಮುಕ್ತಗೊಳಿಸುವದು ಎಂದರ್ಥ, ಈ ಅಭಿಯಾನದ ಅಡಿಯಲ್ಲಿ ಕಾಲೇಜು ಶಿಕ್ಷಕರು ಹಾಗೂ ಸುಮಾರು 16 ಲಕ್ಷ ವಿದ್ಯಾರ್ಥಿಗಳಿಗೆ ಕೋವಿಡ್ ಸಂಕ್ರಾಮಿಕ ರೋಗದ ಸೂಕ್ತ ನಡವಳಿಕೆ ಹಾಗೂ ವ್ಯಾಕ್ಸಿನೇಷನ್ ಹಾಕುವ ಮೂಲಕ ಕೋವಿಡ್ -19 ಸೋಂಕಿನ ಬಗ್ಗೆ ಅರಿವು ಮೂಡಿಸಲು ಈ ಅಭಿಯಾನವನ್ನು ಪ್ರಾರಂಭಿಸಲಾಗುವದು ಎಂದು ತಿಳಿಸಿದ್ದಾರೆ. * ಮಧ್ಯಪ್ರದೇಶ ರಾಜ್ಯವು ಈ ಅಭಿಯಾನವನ್ನು ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯು ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಆರಂಬಿಸಲಾಗುವದು ಎಂದು ತಿಳಿಸಿದ್ದಾರೆ. * ಭಾರತದಲ್ಲಿ ಮಧ್ಯಪ್ರದೇಶ ರಾಜ್ಯವು ಕೋವಿಡ್-19 ಸೋಂಕಿನ ವಿಷಯದಲ್ಲಿ 26 ನೇ ಸ್ಥಾನದಲ್ಲಿದೆ.