Job Description: * ಭಾರತ ಮೂಲದ ಪತ್ರಕರ್ತೆ ಮೇಘಾ ರಾಜಗೋಪಾಲನ್ ಅವರು ಚೀನಾ ದೇಶದ ಷಿನ್ಜಿಯಾಂಗ್ ಪ್ರಾಂತ್ಯದಲ್ಲಿ ಮುಸ್ಲಿಮರನ್ನು ಬಂಧಿಸಲು ರಹಸ್ಯವಾಗಿ ಬೃಹತ್ ಜೈಲುಗಳನ್ನು ನಿರ್ಮಿಸಿರುವ ಕುರಿತು ಸಾಕ್ಷಿ ಸಹಿತ ತನಿಖಾ ವರದಿಯನ್ನು ಪ್ರಕಟಿಸಿದ್ದಾರೆ, ಇದರಿಂದಾಗಿ ಚೀನಾದ ಈ ಕ್ರಮವನ್ನು ಜಗತ್ತಿಗೆ ತಿಳಿಸಿದ್ದಾರೆ, ಆದ್ದರಿಂದ ಈ ಬಾರಿಯ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. * ಮೇಘಾ ರಾಜಗೋಪಾಲನ್ ಈ ವರದಿಗೆ ಸಾಥ್ ನೀಡಿದ ಇಬ್ಬರು ಆಲಿಸನ್ ಕಿಲ್ಲಿಂಗ್ ಹಾಗೂ ಕ್ರಿಸ್ಟೋ ಬಷೇಕ್ ಎಂಬ ಸಹಾಯಕರೊಂದಿಗೆ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ, ಪ್ರಸ್ತುತ ಮೇಘಾ ಅವರು "ಬಜ್ ಫೀಡ್ ನ್ಯೂಸ್" ಸುದ್ದಿವಾಹಿನಿಯಲ್ಲಿ ವರದಿಗಾರ್ತಿಯಾಗಿ ಕೆಲಸವನ್ನು ನಿರ್ವಹಣೆ ಮಾಡುತಿದ್ದರು. * ಮೇಘಾ ರಾಜಗೋಪಾಲನ್ ಜೊತೆಗೆ "ಟಂಪಾ ಬೇ ಟೈಮ್ಸ್"ನ ವರದಿಗಾರರಾದ ನೀಲ್ ಬೇಡಿ ಮತ್ತು ಕ್ಯಾಥ್ಲಿನ್ ಮ್ಯಾಕ್ಗ್ರೊರಿ ಅವರು ಕೂಡ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.