Job Description: * ಟೋಕಿಯೋ ಒಲಿಂಪಿಕ್ಸ್'ನಲ್ಲಿ ಮಹಿಳೆಯರ 49 KG ವಿಭಾಗದಲ್ಲಿ ಭಾರತದ ವೇಟ್ಲಿಫ್ಟರ್ ಮೀರಾಬಾಯಿ ಚಾನು ಅರ್ಹತೆಯನ್ನು ಪಡೆದುಕೊಂಡಿದ್ದಾರೆ ಎಂದು ಅಂತಾರಾಷ್ಟ್ರೀಯ ವೇಟ್ಲಿಫ್ಟಿಂಗ್ ಸಂಸ್ಥೆ ಪ್ರಕಟಿಸಿದೆ, ಹಾಗೂ ಇವರು ಚಿನ್ನದ ಪದಕ ಪಡೆಯುವದಕ್ಕಾಗಿ ಹೋರಾಡಲಿದ್ದಾರೆ ಎಂದು ಭಾರತೀಯ ವೇಟ್ಲಿಫ್ಟಿಂಗ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಸಹದೇವ್ ಯಾದವ್ ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. * ಇತ್ತೀಚಿಗೆ ಏಪ್ರಿಲ್'ನಲ್ಲಿ ತಾಷ್ಕೆಂಟ್ನಲ್ಲಿ ನಡೆದಿರುವ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಚಾನು ಕ್ಲೀನ್ ಹಾಗೂ ಜರ್ಕ್ನಲ್ಲಿ ವಿಶ್ವ ದಾಖಲೆ ಬರೆಯುವದರೊಂದಿಗೆ ಕಂಚಿನ ಪದಕವನ್ನು ಗಿಟ್ಟಿಸಿಕೊಂಡಿದ್ದಾರೆ, ಇದೀಗ ಟೋಕಿಯೋ ಒಲಿಂಪಿಕ್ಸ್'ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.