Job Description: * 2021 ರ ಜೂನ್`ನಲ್ಲಿ ಯುಕೆ ನೇತೃತ್ವದ ಜಿ-7 ವರ್ಚುವಲ್ ಶೃಂಗಸಭೆಯು ಕಾರ್ನ್ವಾಲ್ನಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. * ಜಿ-7 ಶೃಂಗಸಭೆಯು ಇದೇ 2021 ರ ಜೂನ್ 12 ಮತ್ತು 13 ರಂದು ನಡೆಯಲಿದೆ, ಈ ಜಿ-7 ಶೃಂಗಸಭೆಯುಲ್ಲಿ ಭಾರತದ ಪ್ರಧಾನಿಯವರು 2ನೇ ಬಾರಿ ಭಾಗವಹಿಸಲಿದ್ದಾರೆ. * ಜಿ-7 ಫ್ರೆಂಚ್ ಪ್ರೆಸಿಡೆನ್ಸಿ ಬಿಯರಿಟ್ಜ್ ಶೃಂಗಸಭೆಗೆ ಗುಡ್ವಿಲ್ ಪಾಲುದಾರ 2019 ರಲ್ಲಿ ಭಾರತವನ್ನು ಈ ಸಭೆಗೆ ಆಹ್ವಾನ ನೀಡಿತ್ತು, ಆ ಸಂಧರ್ಭದಲ್ಲಿ ಮೋದಿ ಅವರು ಹವಾಮಾನ, ಜೀವವೈವಿಧ್ಯ ಹಾಗೂ ಸಾಗರಗಳು ಮತ್ತು ಡಿಜಿಟಲ್ ಟ್ರಾನ್ಸ್ಫರ್ಮೇಷನ್ ವಿಷಯಗಳ ಕುರಿತು ಅಧಿವೇಶನಗಳಲ್ಲಿ ಭಾಗಿಯಾಗಿದ್ದರು. * 2021 ರಲ್ಲಿ ನಡೆಯುವ ಈ ಜಿ-7 ಶೃಂಗಸಭೆಯು 47ನೇ ಸಭೆಯಾಗಿದೆ, ಈ ಜಿ-7 ಶೃಂಗಸಭೆಯಲ್ಲಿ ಏಳು ಜಿ-7 ಸದಸ್ಯ ರಾಷ್ಟ್ರಗಳ ನಾಯಕರು ಮತ್ತು ಯುರೋಪಿಯನ್ ಒಕ್ಕೂಟದ ಪ್ರತಿನಿಧಿಗಳು ಭಾಗಿಯಾಗುತ್ತಾರೆ, ಪ್ರಸ್ತುತ 1981 ರಿಂದ ಯುರೋಪಿಯನ್ ಆಯೋಗದ ಅಧ್ಯಕ್ಷರು ಈ ಎಲ್ಲಾ ಜಿ-7 ಸಭೆಗಳು ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ಶಾಶ್ವತವಾಗಿ ಭಾಗವಹಿಸುವವರಾಗಿದ್ದರೆ. * ಜಿ-7 ದೇಶಗಳು: ಕೆನಡಾ, ಫ್ರಾನ್ಸ್, ಇಟಲಿ, ಜರ್ಮನಿ, ಜಪಾನ್, ಯುಕೆ ಮತ್ತು ಯುಎಸ್ ದೇಶಗಳು.