Job Description: * ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ (PMAY-U) ಅಡಿಯಲ್ಲಿ ಸುಮಾರು 3.61 ಲಕ್ಷ. ಮನೆಗಳ ನಿರ್ಮಾಣದ ಪ್ರಸ್ತಾವಗಳಿಗೆ ಕೇಂದ್ರವು ಅನುಮತಿಯನ್ನು ನೀಡಿದೆ. * ಕೇಂದ್ರ ಸರ್ಕಾರವು ಕೇಂದ್ರ ಮಂಜೂರಾತಿ ಮತ್ತು ನಿಗಾ ಸಮಿತಿಯ 54ನೇ ಸಭೆಯಲ್ಲಿ ಈ ಯೋಜನೆಯ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಸಭೆಯಲ್ಲಿ ಒಟ್ಟು 13 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಪಾಲ್ಗೊಂಡಿದ್ದವು ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಮಾಹಿತಿಯನ್ನು ನೀಡಿದೆ. * 2021 ರ PMAY-U ಪ್ರಶಸ್ತಿಗಳ ನೂರು ದಿನದ ಸವಾಲುಗಳ ಆಂದೋಲನಕ್ಕೆ ಕೇಂದ್ರ ಸಚಿವಾಲಯದ ಕಾರ್ಯದರ್ಶಿ ಶ್ರೀ ಶಂಕರ್ ಮಿಶ್ರ ಅವರು ಚಾಲನೆ ನೀಡಿದರು. ಈ ಪ್ರಶಸ್ತಿಗಳನ್ನೂ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸ್ಥಳೀಯ ಸಂಸ್ಥೆಯ ಫಲಾನುಭವಿಗಳ ಕೊಡುಗೆ ಹಾಗೂ ಸಾಧನೆಗಳನ್ನೂ ಪರಿಗಣಿಸಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ ಎಂದು ಸಚಿವಾಲಯವು ಮಾಹಿತಿ ನೀಡಿದೆ. * ಪ್ರಸ್ತುತ PMAY-U ಯೋಜನೆ ಅಡಿಯಲ್ಲಿ ಮಂಜೂರಾದ ಒಟ್ಟು ಮನೆಗಳ ಸಂಖ್ಯೆ 112.4 ಲಕ್ಷ. ಇದರಲ್ಲಿ 82.5 ಲಕ್ಷ.ಮನೆಗಳ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲಾಗುವದು, ಈಗಾಗಲೇ 48.31 ಲಕ್ಷ. ಮನೆಗಳನ್ನು ಪೂರ್ಣಗೊಳಿಸಿ ಜನರಿಗೆ ಹಸ್ತಾಂತರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.