Job Description: * ಭಾರತದ ಈಶಾನ್ಯ ರಾಜ್ಯಗಳಲ್ಲಿ ಮ್ಯಾನ್ಮಾರ್`ನ ಸಾವಿರಾರು ಜನರು ಆಶ್ರಯ ಪಡೆದಿದ್ದು, ಇದರಿಂದಾಗಿ ಹೊಸ ಸಮಸ್ಯೆಗಳನ್ನು ಎದುರಾಗುವ ಸಾಧ್ಯತೆಗಳಿವೆ ಎಂದು ಈಶಾನ್ಯ ರಾಜ್ಯಗಳ ಅಧಿಕಾರಿಗಳು ಕಳವಳವನ್ನು(ಆತಂಕ) ವ್ಯಕ್ತಪಡಿಸಿದ್ದಾರೆ. * ಪ್ರಸ್ತುತ ಮ್ಯಾನ್ಮಾರ್`ನ ಪ್ರಜಾಪ್ರಭುತ್ವ ಮರುಸ್ಥಾಪಿಸುವಂತೆ ನಡೆಸುವ ಹೋರಾಟದ ಚಟುವಟಿಕೆಗಳಿಗೆ ಈ ರಾಜ್ಯಗಳು ತಾಣವಾಗಬಹುದು, ಇದರಿಂದಾಗಿ ಇಲ್ಲಿ ಅಸ್ಥಿರತೆ ಸೃಷ್ಟಿಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ. * ಮಿಜೋರಾಂ, ಮಣಿಪುರ ಮತ್ತು ನಾಗಾಲ್ಯಾಂಡ್ ಪ್ರಸ್ತುತ ಈಶಾನ್ಯ ರಾಜ್ಯಗಳಲ್ಲಿ ಮ್ಯಾನ್ಮಾರ್`ನ ಸರಿ ಸುಮಾರು 16 ಸಾವಿರ ಜನರು ಆಶ್ರಯ ಪಡೆಯುತ್ತಿದ್ದಾರೆ, ಇದರಲ್ಲಿ ಅತೀ ಹೆಚ್ಚು ಜನರು ಮಿಜೋರಾಂ ರಾಜ್ಯವನ್ನು ಪ್ರವೇಶಿಸಿದ್ದಾರೆ ಎಂದು ಅಲ್ಲಿನ ಸರ್ಕಾರಿ ಅಧಿಕಾರಿಗಳು ಅಂದಾಜಿಸಿ ಮಾಹಿತಿಯನ್ನು ನೀಡಿದ್ದಾರೆ. * ಇತ್ತೀಚಿಗೆ ಮ್ಯಾನ್ಮಾರ್`ನಲ್ಲಿ ನಡೆಯುತ್ತಿರುವ ಮಿಲಿಟರಿ ಆಡಳಿತದ ದೌರ್ಜನ್ಯದಿಂದ ಪಾರಾಗಲು ಅಲ್ಲಿನ ಜನರು ಈಶಾನ್ಯ ರಾಜ್ಯಗಳಿಗೆ ಆಗಮಿಸಿದ್ದಾರೆ.