Job Description: * 2020-21ರ ಅವಧಿಯ ಭಾರತದ ಕೃಷಿ ಸಂಬಂಧಿತ ಉತ್ಪನ್ನಗಳ ರಫ್ತು ಶೇಕಡಾ 17.34% ರಷ್ಟು ಏರಿಕೆಯಾಗಿದೆ ಅಂದರೆ 41.25 ಬಿಲಿಯನ್ USD ಗಳಿಗೆ ಸಮ ಎಂದರ್ಥ. * ಭಾರತವು ಈ ಕೃಷಿ ರಫ್ತಿನ ಬೆಳವಣಿಗೆಯಲ್ಲಿ ಸಿರಿಧಾನ್ಯಗಳಾಗಿರುವ ಗೋಧಿ, ರಾಗಿ, ಬಾಸ್ಮತಿ ಅಲ್ಲದ ಅಕ್ಕಿ, ಮೆಕ್ಕೆಜೋಳ ಹಾಗೂ ಇತರ ಧಾನ್ಯಗಳ ರಫ್ತಿನಲ್ಲಿ ಬೆಳವಣಿಗೆಯನ್ನು ಕಂಡಿವೆ ಎಂದು ವಾಣಿಜ್ಯ ಕಾರ್ಯದರ್ಶಿಯಾಗಿರುವ ಅನುಪ್ ವಾಧವನ್ ಮಾಹಿತಿ ನೀಡಿದ್ದಾರೆ. * ಭಾರತದಲ್ಲಿ ಮೊದಲ ಬಾರಿಗೆ ಕ್ಲಸ್ಟರ್ಗಳಿಂದ ರಫ್ತು ನಡೆದಿದೆ, ಅವುಗಳು ವಾರಣಾಸಿಯಿಂದ ತಾಜಾ ತರಕಾರಿ ಹಾಗೂ ಮಾವಿನಹಣ್ಣು, ಚಂದೌಲಿಯಿಂದ ಕಪ್ಪು ಅಕ್ಕಿ ರವಾನೆಯಾಗಿವೆ. * ಪ್ರಸ್ತುತ ಯುನೈಟೆಡ್ ಸ್ಟೇಟ್ಸ್, ಚೀನಾ, ಬಾಂಗ್ಲಾದೇಶ, ಯುನೈಟೆಡ್ ಅರಬ್ ಎಮಿರೇಟ್ಸ್, ವಿಯೆಟ್ನಾಂ, ಸೌದಿ ಅರೇಬಿಯಾ, ಇಂಡೋನೇಷ್ಯಾ, ನೇಪಾಳ, ಇರಾನ್ ಮತ್ತು ಮಲೇಷ್ಯಾ ರಾಷ್ಟ್ರಗಳು ಭಾರತದ ಕೃಷಿ ಉತ್ಪನ್ನಗಳ ಅತಿದೊಡ್ಡ ಮಾರುಕಟ್ಟೆಯಾಗಿರುವ ದೇಶಗಳಾಗಿವೆ. * ಭಾರತ ದೇಶವು ದಾಳಿಂಬೆಗಾಗಿ ಆಸ್ಟ್ರೇಲಿಯಾದಲ್ಲಿ ಮಾರುಕಟ್ಟೆ ಪ್ರವೇಶವನ್ನು ಪಡೆದಿದೆ, ಕಿತ್ತಳೆಗಾಗಿ ಸೆರ್ಬಿಯಾದಲ್ಲಿ ಮಾರುಕಟ್ಟೆ ಪ್ರವೇಶ, ಮಾವು ಮತ್ತು ಬಾಸ್ಮತಿ ಅಕ್ಕಿಗಾಗಿ ಅರ್ಜೆಂಟೀನಾದಲ್ಲಿ ಮಾರುಕಟ್ಟೆ ಪ್ರವೇಶ, ಮಾವು, ಬಾಳೆಹಣ್ಣು ಹಾಗೂ ಸೋಯಾಬೀನ್ ಎಣ್ಣೆಕೇಕ್`ಗಾಗಿ ಉಜ್ಬೇಕಿಸ್ತಾನದಲ್ಲಿ ಮಾರುಕಟ್ಟೆ ಪ್ರವೇಶ, ಕ್ಯಾರೆಟ್ ಬೀಜಗಳಿಗಾಗಿ ಇರಾನ್ನಲ್ಲಿ ಮಾರುಕಟ್ಟೆ ಪ್ರವೇಶ, ಅಂತಿಮವಾಗಿ ಗೋಧಿ ಹಿಟ್ಟು, ಬಾಸ್ಮತಿ ಅಕ್ಕಿ ಜೊತೆ ಟೊಮೆಟೊ, ಓಕ್ರಾ ಹಾಗೂ ಈರುಳ್ಳಿ ಬೆಳೆಗಳಿಗಾಗಿ ಭೂತಾನ್ನಲ್ಲಿ ಮಾರುಕಟ್ಟೆ ಪ್ರವೇಶವನ್ನು ಪಡೆದುಕೊಂಡಿದೆ.