Job Description: * ಪ್ರಸ್ತುತ ಅಸ್ಸಾಂ ರಾಜ್ಯದ ಕಣಿವೆಯ ಉಷ್ಣವಲಯದ ಆರ್ದ್ರ ನಿತ್ಯಹರಿದ್ವರ್ಣ ಕಾಡುಗಳ ಕೊನೆಯ ವಿಸ್ತಾರವಾದ ಡಿಹಿಂಗ್ ಪಟ್ಕೈ (Dhing- Patkai)ಯನ್ನು ರಾಷ್ಟ್ರೀಯ ಉದ್ಯಾನವನವೆಂದು ಅಸ್ಸಾಂ ಸರ್ಕಾರ ತಿಳಿಸಿದೆ. * ಭಾರತದಲ್ಲಿ ಅತಿ ಹೆಚ್ಚು ರಾಷ್ಟ್ರೀಯ ಉದ್ಯಾನವನಗಳನ್ನು ಹೊಂದಿರುವ ಪೈಕಿ ಅಸ್ಸಾಂ ರಾಜ್ಯವು 3ನೇ ಸ್ಥಾನದಲ್ಲಿದೆ. * ಮಧ್ಯಪ್ರದೇಶ ರಾಜ್ಯವು 12 ರಾಷ್ಟ್ರೀಯ ಉದ್ಯಾನವನಗಳನ್ನು ಹೊಂದಿ ಅಗ್ರ ಸ್ಥಾನದಲ್ಲಿದೆ. * ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು 9 ರಾಷ್ಟ್ರೀಯ ಉದ್ಯಾನವನಗಳನ್ನು ಹೊಂದಿ 2ನೇ ಸ್ಥಾನದಲ್ಲಿದೆ. * ಡಿಹಿಂಗ್ ಪಟ್ಕೈ ರಾಷ್ಟ್ರೀಯ ಉದ್ಯಾನವನ ಅಸ್ಸಾಂನ ದಿಬ್ರುಗರಃ ಮತ್ತು ಟಿನ್ಸುಕಿಯಾ ಜಿಲ್ಲೆಗಳನ್ನು ಒಳಗೊಂಡ 234.26-ಚದರ.ಕಿ.ಮೀ. ವಿಸ್ತೀರ್ಣ ಹೊಂದಿದೆ, ಈ ಉದ್ಯಾನವನವು 310 ಜಾತಿಯ ಚಿಟ್ಟೆ, ಹಾಗೂ ಹುಲಿ, ಚಿರತೆ, ಹಾಗೂ 47 ಜಾತಿಯ ಸರೀಸೃಪಗಳು ಮತ್ತು ಸಸ್ತನಿಗಳನ್ನು ಒಳಗೊಂಡ ಉದ್ಯಾನವನ ಇದಾಗಿದೆ.