Job Description: * ಪ್ರಸ್ತುತ ಗೂಗಲ್ ಸಂಸ್ಥೆಯು ಇಂಟರ್ನೆಟ್ ಸಂಪರ್ಕ ಸಾಮರ್ಥ್ಯವನ್ನು ಹೆಚ್ಚಿಸಲು ಯುನೈಟೆಡ್ ಸ್ಟೇಟ್ಸ್, ಬ್ರೆಜಿಲ್, ಅರ್ಜೆಂಟೀನಾ ಮತ್ತು ಉರುಗ್ವೆ ರಾಷ್ಟ್ರಗಳನ್ನು ಸಂಪರ್ಕಿಸುವ ವಿಶ್ವದ ಅತಿ ಉದ್ದದ ಸಾಗರದೊಳಗಿನ ಕೇಬಲ್'ನ್ನು ನಿರ್ಮಿಸಲು ಆಲ್ಫಾಬೆಟ್ ಗೂಗಲ್ ಸಿದ್ಧವಾಗಿದೆ. * ಗೂಗಲ್ ಸಂಸ್ಥೆಯು ಫಿರ್ಮಿನಾ ಎಂದು ಕರೆಯುವ ಸಾಗರದೊಳಗಿನ ಕೇಬಲ್ ಯುನೈಟೆಡ್ ಸ್ಟೇಟ್ಸ್'ನ ಪೂರ್ವ ಕರಾವಳಿಯಿಂದ ಹಿಡಿದು ಅರ್ಜೆಂಟೀನಾದ ಲಾಸ್ ಟೋನಿನಾಸ್ ಮತ್ತು ಬ್ರೆಜಿಲ್ನ ಪ್ರಿಯಾ ಗ್ರಾಂಡೆ ಮತ್ತು ಉರುಗ್ವೆಯ ಪಂಟಾ ಡೆಲ್ ಎಸ್ಟೇನಲ್ಲಿ ಹೆಚ್ಚುವರಿ ಇಳಿಯುವಿಕೆಯೊಂದಿಗೆ ಈ ಕೇಬಲ್ ಚಲಿಸುತ್ತದೆ ಎಂದು ತಿಳಿಸಿದೆ. * ಪ್ರಸ್ತುತ ದಕ್ಷಿಣ ಅಮೆರಿಕಾದಲ್ಲಿ ಗೂಗಲ್ ಸೇವೆಗಳನ್ನು ಬಳಸುತ್ತಿರುವವರ ಪ್ರವೇಶವನ್ನು ಫಿರ್ಮಿನಾ ಸಾಗರದ ಒಳಗಿನ ಈ ಕೇಬಲ್ ಸುಧಾರಿಸಲಿದೆ ಎಂದು ತಿಳಿಸಿದ್ದಾರೆ, ಈ ಕೇಬಲ್ 12ಫೈಬರ್ ಜೋಡಿಗಳನ್ನು ಹೊಂದಿರುತ್ತದೆ, ಇದು ಗೂಗಲ್ ಬಳಕೆದಾರರಿಗೆ ಜಿಮೇಲ್, ಯೂಟ್ಯೂಬ್ ಮತ್ತು ಗೂಗಲ್ ಸೇವೆಗಳನ್ನೂ ವೇಗವಾಗಿ ಒದಗಿಸಿಕೊಡುತ್ತದೆ. * ಈ ಆಲ್ಫಾಬೆಟ್ ಗೂಗಲ್ ಅಮೇರಿಕನ್ ಬಹುರಾಷ್ಟ್ರೀಯ ಸಂಘವನ್ನು ಗೂಗಲ್ 2015ರ ಅಕ್ಟೋಬರ್. 2ರಂದು ರಚಿಸಿದೆ, ಹಾಗೂ ಇದು ಪ್ರಧಾನ ಕಚೇರಿಯನ್ನು ಕ್ಯಾಲಿಫೋರ್ನಿಯಾದಲ್ಲಿ ಹೊಂದಿದೆ. * ಆದಾಯದ ಪ್ರಕಾರ ಈ ಗೂಗಲ್ ಕಂಪನಿ ವಿಶ್ವದ 4ನೇ ಅತಿದೊಡ್ಡ ತಂತ್ರಜ್ಞಾನ ಕಂಪನಿಯಾಗಿದೆ.