Job Description: * ನೈಜೀರಿಯಾ ದೇಶದಲ್ಲಿ ಅಮೆರಿಕ ಮೂಲದ ಸಾಮಾಜಿಕ ಜಾಲತಾಣ ಟ್ವಿಟರ್`ನ್ನು ನಿಷೇಧಿಸಿದೆ, ಇದೀಗ ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಅಭಿವೃದ್ಧಿಪಡಿಸಿರುವ 'ಕೂ' ಆಯಪ್ ಬಳಕೆಗೆ ಅಲ್ಲಿನ ಸರ್ಕಾರ ಸಮ್ಮತಿ ನೀಡಿದೆ, ಇದರ ಬೆನ್ನಲ್ಲೇ "ಕೂ" ಸಹ ಸಂಸ್ಥಾಪಕ ಆರ್ ಅಪ್ರಮೇಯ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. * ಕೆಲವು ದಿನಗಳ ಹಿಂದೆ ಅಂದರೆ ಜೂನ್ 2 ರಂದು ನೈಜೀರಿಯಾ ಅಧ್ಯಕ್ಷ ಮುಹಮ್ಮದ್ ಬುಹಾರಿ ಅವರ ಟ್ವೀಟ್`ನ್ನು ಅವಹೇಳನಕಾರಿ ನೀತಿಯ ಉಲ್ಲಂಘನೆಯನ್ನು ಉಲ್ಲೇಖಿಸಿ ಅಳುಹಿಸಲಾಗಿತ್ತು, ಇದರ ನಂತರ ನೈಜೀರಿಯಾ ಸರ್ಕಾರ ಟ್ವಿಟರ್'ಗೆ ಅನಿರ್ದಿಷ್ಟಾವಧಿಗೆ ನಿಷೇಧವನ್ನು ಹೇರಿತ್ತು ಎಂದು ನೈಜೀರಿಯಾದ ಮಾಹಿತಿ ಮತ್ತು ಸಂಸ್ಕೃತಿ ಸಚಿವ ಲೈ ಮೊಹಮ್ಮದ್ ಅವರು ತಿಳಿಸಿದ್ದರು. * ನೈಜೀರಿಯಾದಲ್ಲಿ ಟ್ವಿಟರ್ ನಿಷೇದ ಹೇರಿಕೆಯನ್ನು ತಗೆಯಬೇಕಾದರೆ ಟ್ವಿಟರ್ ಮೊದಲು ನೈಜೀರಿಯಾದಲ್ಲಿ ಕಂಪನಿಯಾಗಿ ನೋಂದಾಯಿಸಿಕೊಳ್ಳಬೇಕು ಮತ್ತು ನೈಜೀರಿಯಾದ ಸಾಂಸ್ಥಿಕ ಅಸ್ತಿತ್ವಕ್ಕೆ ವಿರುದ್ಧವಾದ ಚಟುವಟಿಕೆಗಳನ್ನು ಉತ್ತೇಜಿಸುವವರು ಈ ಆಪ್'ನ್ನು ಬಳಸಲು ಅನುಮತಿ ನೀಡಬಾರದು ಈ ನೀತಿಗಳಿಗೆ ಒಪ್ಪಿಕೊಳ್ಳಬೇಕು ಎಂದು ನೈಜೀರಿಯಾದ ಮಾಹಿತಿ ಮತ್ತು ಸಂಸ್ಕೃತಿ ಸಚಿವ ಲೈ ಮೊಹಮ್ಮದ್ ಅವರು ಎಎಫ್ಪಿಗೆ ಮಾಹಿತಿಯನ್ನು ತಿಳಿಸಿದರು. * ಪ್ರಸ್ತುತ 2021ರ ಹೊಸ ಐಟಿ ನಿಯಮಗಳನ್ನು ಫೇಸ್ಬುಕ್, ವಾಟ್ಸ್ ಆಯಪ್ ಮತ್ತು ಗೂಗಲ್ ಒಡೆತನದ ಎಲ್ಲ ಪ್ರಮುಖ ವೇದಿಕೆಗಳು ಪಾಲಿಸುತ್ತಿವೆ, ಆದರೆ ಟ್ವಿಟರ್ ಹೊಸ ಐಟಿ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ತಿಳಿದು ಬಂದಿದೆ.