Job Description: * ಪ್ರಸ್ತುತ ಯುಎಸ್ ಆಹಾರ ಮತ್ತು ಔಷಧೀಯ ಪ್ರಾಧಿಕಾರವು ಭಾರತ್ ಬಯೋಟೆಕ್ ಉತ್ಪಾದಿಸುವ ಕೋವಿಡ್-19 ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆ ಅರ್ಜಿಯ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. * ಭಾರತ್ ಬಯೋಟೆಕ್ ಸಂಸ್ಥೆಯ ಜೊತೆ ಬಯೋಫಾರ್ಮಾಸ್ಯುಟಿಕಲ್ ಕಂಪನಿ 'ಯುನೈಟೆಡ್ ಸ್ಟೇಟ್ಸ್`ನಲ್ಲಿ ಕೊವಾಕ್ಸಿನ್ ಲಸಿಕೆ ಪೂರೈಕೆ ಮಾಡುವದಕ್ಕೆ ಒಪ್ಪಂದವನ್ನು ಮಾಡಿಕೊಂಡಿದೆ, ಆದರೆ US`ನ ಆಹಾರ ಮತ್ತು ಔಷಧೀಯ ಪ್ರಾಧಿಕಾರದ ನಿರ್ಧಾರ ಹಾಗೂ ಶಿಫಾರಸ್ಸಿನ ಆಧಾರದ ಮೇಲೆ ಪೂರ್ಣ ಪ್ರಮಾಣದ ಸಮ್ಮತಿ ಸಂಗ್ರಹಿಸಿ ಅನುಮೋದನೆ ಪಡೆಯಲಾಗುವುದು ಎಂದು ಈ ಕಂಪನಿ ತಿಳಿಸಿದೆ. * ಭಾರತ್ ಬಯೋಟೆಕ್ ಸಂಸ್ಥೆಯು 2021ನೇ ಮಾರ್ಚ್ ತಿಂಗಳಿನಲ್ಲಿ ನಡೆಸಿದ ಕೊವ್ಯಾಕ್ಸಿನ್ ಲಸಿಕೆ ದತ್ತಾಂಶವನ್ನು ಒಕುಜೆನ್ ಸಂಸ್ಥೆಯು ಯುಎಸ್ FDA`ಗೆ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ, ಆದರೆ US`ನ ಆಹಾರ ಮತ್ತು ಔಷಧೀಯ ಪ್ರಾಧಿಕಾರವು ಕಳೆದ ತಿಂಗಳ ಆರಂಭದಲ್ಲೇ ಕೊವಿಡ್-19 ಲಸಿಕೆ ಅನುಮೋದನೆಗೆ ಸಂಬಂಧಿಸಿದ ಹೊಸ ಅರ್ಜಿಗಳಿಗೆ ಅನುಮತಿ ನೀಡುವುದಿಲ್ಲ ಎಂದು ತಿಳಿಸಿತ್ತು. ಇದಾದ ನಂತರ ಜೂನ್`ನಲ್ಲಿ ತುರ್ತು ಬಳಕೆ ಅರ್ಜಿ ಸಲ್ಲಿಸಲು ಅರ್ಹತೆ ಪಡೆಯಲಿದೆ ಎಂದು ಕಂಪನಿಯು ಒಕುಜೆನ್ ತಿಳಿಸಿದೆ.