Job Description: * ಮೊದಲ ಬಾರಿಗೆ ಇಬ್ಬರು ಮಹಿಳಾ ಅಧಿಕಾರಿಗಳು ಹೆಲಿಕಾಪ್ಟರ್ ಪೈಲಟ್ಗಳಾಗಿ ತರಬೇತಿ ಪಡೆಯಲು ಮಹಾರಾಷ್ಟ್ರದ ನಾಸಿಕ್ನಲ್ಲಿರುವ ಯುದ್ಧಸೇನಾ ವಿಮಾನಯಾನ ತರಬೇತಿ ಕೇಂದ್ರಕ್ಕೆ ಆಯ್ಕೆಯಾಗಿ ಹೊಸ ಮೈಲುಗಲ್ಲು ಇಟ್ಟಿದ್ದಾರೆ, ಪ್ರಸ್ತುತ ತರಬೇತಿ ಪಡೆಯಲು ಸಿದ್ದವಾಗಿದ್ದ 47 ಸೇನಾಧಿಕಾರಿಗಳ ಪೈಕಿ ಕೇವಲ ಇಬ್ಬರು ಮಹಿಳೆಯರು ಆಯ್ಕೆಯಾಗಿದ್ದಾರೆ. * ಹೆಲಿಕಾಪ್ಟರ್ ಪೈಲಟ್ಗಳಾಗಿ ತರಬೇತಿ ಪಡೆಯಲಿರುವ ಮಹಿಳಾ ಅಧಿಕಾರಿಗಳ ತರಬೇತಿಯು 2022ರ ಜುಲೈ ತಿಂಗಳಲ್ಲಿ ಪೂರ್ಣವಾಗಲಿದೆ, ನಂತರ ಇವರು ಪೈಲಟ್ಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. * ಪ್ರಸ್ತುತ ಭಾರತೀಯ ಸೇನೆಯ ವಾಯುಯಾನ ವಿಭಾಗದಲ್ಲಿ ಇಲ್ಲಿಯತನಕ ಪುರುಷರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದರು, ಆದರೆ ಇದೀಗ ಮಹಿಳೆಯರನ್ನು ನೇಮಕ ಮಾಡಿಕೊಳ್ಳಲು ಸೇನಾ ಮುಖ್ಯಸ್ಥ ಜನರಲ್ ಮುಕುಂದ್ನ ನರವಾನೆ ಅವರು ಗ್ರೀನ್ ಸಿಗ್ನಲ್ ನೀಡಿದ ನಂತರ ಈ ಕಾರ್ಯ ನಡೆದಿದೆ, ಈ ಹಿಂದೆ ಮಹಿಳೆಯರು ಕೇವಲ ಭಾರತೀಯ ಸೇನೆಯಲ್ಲಿ ಭೂ ಕರ್ತವ್ಯ ಸೇವೆಗಳಿಗೆ ಸೇರಿಸಿಕೊಳ್ಳಲು ಮಾತ್ರ ಅವಕಾಶವಿತ್ತು ಮತ್ತೆ ಇದೀಗ ಸೇನೆಯ ವಾಯುಯಾನ ವಿಭಾಗದಲ್ಲಿಯು ಅವಕಾಶ ನೀಡಲಾಗಿದೆ.