Job Description: * ಪ್ರಸ್ತುತ ಕುವೈತ್ ವಿದೇಶಾಂಗ ಸಚಿವ ಶೇಕ್ ಆಹಮ್ಮದ್ ನಾಸೀರ್ ಅಲ್ ಮಹಮ್ಮದ್ ಅಲ್ ಸಾಬ್ ಅವರ ಆಮಂತ್ರಣದ ಮೇರೆಗೆ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಅವರು ತೈಲ ರಾಷ್ಟ್ರವಾಗಿರುವ ಕುವೈತ್ಗೆ ಭೇಟಿ ನೀಡಿದ್ದಾರೆ, ನಂತರ ಅಲ್ಲಿನ ವಿದೇಶಾಂಗ ಸಚಿವರೊಂದಿಗೆ ಮಹತ್ವದ ಮಾತುಕತೆ ನಡೆಸಿ ನಂತರ ಭಾರತೀಯ ಪ್ರಧಾನಿ ಮೋದಿ ಅವರು ನೀಡಿರುವ ವೈಯಕ್ತಿಕ ಪತ್ರವನ್ನು ಕುವೈತ್'ನ ಮುಖ್ಯಸ್ಥರಿಗೆ ನೀಡಲಿದ್ದಾರೆ. * ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಅವರು ಇದೇ ಮೊದಲ ಭಾರಿಗೆ ಕುವೈತ್ ಪ್ರವಾಸ ಕೈಗೊಂಡಿದ್ದಾರೆ, ಕುವೈತ್ ವಿದೇಶಾಂಗ ಸಚಿವರು ಭಾರತಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಇಂಧನ, ವ್ಯಾಪಾರ, ಬಂಡವಾಳ, ಮಾಹಿತಿ ತಂತ್ರಜ್ಞಾನ, ಮಾನವ ಸಂಪನ್ಮೂಲ ಬಗ್ಗೆ ಜಂಟಿ ಸಚಿವಾಲಯದ ಆಯೋಗ ರಚನೆಗೆ ಅನುಮತಿ ನೀಡಲಾಗಿತ್ತು.