Job Description: * ಮಾಜಿ ಬಾಕ್ಸರ್ ಡಿಂಕೊ ಸಿಂಗ್ ಅವರು 1998ರ ಬ್ಯಾಕಾಂಕ್ ಏಷ್ಯನ್ ಗೇಮ್ಸ್'ನಲ್ಲಿ ಚಿನ್ನದ ಪದಕವನ್ನು ಗಳಿಸಿದ್ದರು, ಇದೀಗ ಇವರು ತಮ್ಮ 42ನೇ ವಯಸ್ಸಿನಲ್ಲಿ ಅನಾರೋಗ್ಯದ ಕಾರಣದಿಂದಾಗಿ ವಿಧಿವಶರಾಗಿದ್ದಾರೆ, ಪ್ರಸ್ತುತ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಸಂತಾಪ ಸೂಚಿಸಿದ್ದಾರೆ. * ಮಣಿಪುರ ಮೂಲದ ಡಿಂಕೊ ಸಿಂಗ್ ಅವರು ತಮ್ಮ 10ನೇ ವಯಸ್ಸಿನಲ್ಲಿ ಸಬ್ ಜೂನಿಯರ್ ಬಾಕ್ಸಿಂಗ್ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು, 2000ರಲ್ಲಿ ಸಿಡ್ನಿಯಲ್ಲಿ ನಡೆದ ಒಲಿಂಪಿಕ್ಸ್ನಲ್ಲೂ ಭಾರತ ದೇಶದ ಪರವಾಗಿ ಆಡಿದ್ದರು. * ಡಿಂಕೊ ಸಿಂಗ್ ಅವರಿಗೆ ಅರ್ಜುನ ಪ್ರಶಸ್ತಿ ಹಾಗೂ 2013ರಲ್ಲಿ ಪದ್ಮ ಶ್ರೀ ಪ್ರಶಸ್ತಿ ಲಭಿಸಿದೆ.