Job Description: * 2021ರ ವಾರ್ಷಿಕ ಸಮೀಕ್ಷೆಯ ಪ್ರಕಾರ ವಿಶ್ವದ ಅತ್ಯಂತ ವಾಸಯೋಗ್ಯ ನಗರಗಳ ಶ್ರೇಯಾಂಕ ಬಿಡುಗಡೆಯಾಗಿದೆ. * ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕ ರೋಗವು ವಿಶ್ವದ ಅತ್ಯಂತ ವಾಸಯೋಗ್ಯ ನಗರಗಳ ಶ್ರೇಯಾಂಕವನ್ನು ಏರುಪೆರು ಮಾಡಿದೆ, ಇದರ ನಡುವೆಯೂ 2021ರಲ್ಲಿ ಆಕ್ಲೆಂಡ್ ಅತೀ ಹೆಚ್ಚು ವಾಸಯೋಗ್ಯ ನಗರವಾಗಿದೆ, ಆಕ್ಲೆಂಡ್ ನ್ಯೂಜಿಲೆಂಡ್ನ ಉತ್ತರ ದ್ವೀಪದ ಪ್ರಮುಖ ನಗರವಾಗಿದೆ. * ಆಕ್ಲೆಂಡ್'ನ ನಂತರ ಸ್ಥಾನಗಳಲ್ಲಿ ಜಪಾನ್ನಲ್ಲಿ ಒಸಾಕಾ ಹಾಗೂ ಟೋಕಿಯೊ, ಆಸ್ಟ್ರೇಲಿಯಾದ ಅಡಿಲೇಡ್ ಮತ್ತು ನ್ಯೂಜಿಲೆಂಡ್ನ ವೆಲ್ಲಿಂಗ್ಟನ್ ನಗರಗಳಾಗಿವೆ. * ಪ್ರಸ್ತುತ ಸಿರಿಯಾದಲ್ಲಿ ನಡೆಯುತ್ತಿರುವ ಅಂತರ್ಯುದ್ಧದ ಕಾರಣದಿಂದಾಗಿ ಡಮಾಸ್ಕಸ್ನಲ್ಲಿ ಜೀವನ ನಡೆಸುವದು ಅತ್ಯಂತ ಕಷ್ಟಕರವಾಗಿದೆ ಎಂದು ವರದಿಯನ್ನು ಮಾಡಿದೆ. * ಪ್ರಸ್ತುತ 2021ರಲ್ಲಿ ವಾಸಯೋಗ್ಯಕ್ಕೆ ಯುರೋಪಿಯನ್ ನಗರಗಳು ಕಳಪೆಯಾಗಿವೆ, ಈ ಹಿಂದೆ 2018-20ರ ಸಮಯದಲ್ಲಿ ವಿಯೆನ್ನಾ ಸಿಟಿ ವಿಶ್ವದ ಅತ್ಯಂತ ವಾಸಯೋಗ್ಯ ನಗರವಾಗಿತ್ತು ಇದೀಗ ಈ ನಗರವು 12ನೇ ಸ್ಥಾನವನ್ನು ಪಡೆದಿದೆ. * ಈ ಹಿಂದೆ ಯುರೋಪಿಯನ್ ಅಗ್ರ ಹತ್ತು ಅತಿದೊಡ್ಡ ನಗರಗಳು ವಾಸಯೋಗ್ಯಕ್ಕೆ ಉತ್ತಮವಾಗಿದ್ದವು ಇದೀಗ ಅಂದರೆ 2021ರಲ್ಲಿ ಯುರೋಪಿಯನ್ 8ನಗರಗಳು ಶ್ರೇಯಾಂಕದಲ್ಲಿ ಕುಸಿತವನ್ನು ಕಂಡಿವೆ.