Job Description: * ಪ್ರಸ್ತುತ ಬಿಟ್ಕಾಯಿನ್'ನ್ನು ಕಾನೂನು ಟೆಂಡರ್ ಆಗಿ ಸ್ವೀಕರಿಸಿದ ಮೊದಲ ದೇಶ ಎಲ್ ಸಾಲ್ವಡಾರ್(El Salvador), ಎಲ್ ಸಾಲ್ವಡಾರ್ ಅಧಿಕೃತವಾಗಿ ಮಧ್ಯ ಅಮೆರಿಕದ ಒಂದು ದೇಶ. ಇದು ಈಶಾನ್ಯದಲ್ಲಿ ಹೊಂಡುರಾಸ್, ವಾಯುವ್ಯದಲ್ಲಿ ಗ್ವಾಟೆಮಾಲಾ ಮತ್ತು ದಕ್ಷಿಣದಲ್ಲಿ ಪೆಸಿಫಿಕ್ ಸಾಗರದ ಗಡಿಯನ್ನು ಹಂಚಿಕೊಂಡಿದೆ. * ಅಂತರರಾಷ್ಟ್ರೀಯ ಹಣಕಾಸು ನಿಧಿಯೊಂದಿಗೆ ಎಲ್ ಸಾಲ್ವಡಾರ್ನ 1 ಬಿಲಿಯನ್ ಕಾರ್ಯಕ್ರಮದ ಮೇಲೆ ಕ್ರಿಪ್ಟೋಕರೆನ್ಸಿಯನ್ನು ಕಾನೂನುಬದ್ಧಗೊಳಿಸುವ ಬಗ್ಗೆ ಕಳವಳವಿತ್ತು ಆದರೂ ಸಹ ಸಾಧ್ಯವಿದ್ದ 84 ಮತಗಳಲ್ಲಿ 62 ಬಹುಮತಗಳನ್ನೂ ಪಡೆದು ಈ ಪ್ರಸ್ತಾಪವನ್ನು ಅಂಗೀಕರಿಸಲಾಗಿದೆ. * ಪ್ರಸ್ತುತ ವಿದೇಶದಲ್ಲಿ ವಾಸ ಮಾಡುತ್ತಿರುವ ಸಾಲ್ವಡೊರನ್ಗಳಿಗೆ ಹಣ ರವಾನೆ ಮಾಡಲು ಸಹಾಯ ಮಾಡುವ ಸಾಮರ್ಥ್ಯವನ್ನು ಪರಿಗಣಿಸಿ ಈ ಬಿಟ್ಕಾಯಿನ್'ಗೆ ಅನುಮೋದನೆ ನೀಡಲಾಗಿದೆ, ಹಾಗೂ ಇದು ಎಲ್ ಸಾಲ್ವಡಾರ್ನಲ್ಲಿ ಆರ್ಥಿಕ ಹೂಡಿಕೆ, ಪ್ರವಾಸೋದ್ಯಮ ಜೊತೆಗೆ ಆರ್ಥಿಕ ಅಭಿವೃದ್ಧಿಯನ್ನು ತರಲಿದೆ ಎಂದು ತಿಳಿಸಲಾಗಿದೆ, US ಡಾಲರ್ ದೇಶದಲ್ಲಿ ಕಾನೂನು ಟೆಂಡರ್ ಆಗಿ ಮುನ್ನಡೆದಿದೆ. * ವಿಶ್ವಬ್ಯಾಂಕ್ ಮಾಹಿತಿಯ ಪ್ರಕಾರ 2019ರಲ್ಲಿ 6 ಬಿಲಿಯನ್ ಬಿಟ್ಕಾಯಿನ್ ದೇಶಕ್ಕೆ ರವಾನೆ ಆಗಿದೆ, ಪ್ರಸ್ತುತ GDPಯ 5ನೇ ಒಂದು ಭಾಗವಾಗಿದೆ. * ಪ್ರಸ್ತುತ 2009ರಲ್ಲಿ ಬಿಟ್ ಕಾಯಿನ್ ಬಿಡುಗಡೆಯಾದ ಮೊದಲ ವಿಕೇಂದ್ರೀಕೃತ ಕ್ರಿಪ್ಟೋಕರೆನ್ಸಿ ಆಗಿದೆ, ಇದು ಕೇಂದ್ರ ಬ್ಯಾಂಕ್ ಅಥವಾ ಯಾವುದೇ ಏಕ ನಿರ್ವಾಹಕರನ್ನು ಹೊಂದಿರುವುದಿಲ್ಲ ಹಾಗೂ ಇದಕ್ಕೆ ಯಾವುದೇ ಮಧ್ಯವರ್ತಿಗಳ ಅಗತ್ಯವಿರುವದಿಲ್ಲ, ಇದನ್ನು ಪೀರ್-ಟು-ಪೀರ್ ಬಿಟ್ಕಾಯಿನ್ ನೆಟ್ವರ್ಕ್ನಲ್ಲಿ ಬಳಕೆದಾರರಿಂದ ಬಳಕೆದಾರರಿಗೆ ರವಾನಿಸಲಾಗುತ್ತದೆ.