Job Description: * ಭಾರತೀಯ ನೌಕಾಪಡೆಯು ಯುನೈಟೆಡ್ ಸ್ಟೇಟ್ಸ್ (US)ನಿಂದ ಮೂರು 24 MH-60 ರೋಮಿಯೋ ಮಲ್ಟಿರೋಲ್ ಹೆಲಿಕಾಪ್ಟರ್'ಗಳನ್ನೂ 2021ರ ಜುಲೈನಲ್ಲಿ ಸ್ವೀಕರಿಸಲು ಸಿದ್ಧವಾಗಿದೆ. * ಭಾರತವು 2020ರ ಫೆಬ್ರವರಿಯಲ್ಲಿ ಲಾಕ್ಹೀಡ್ ಮಾರ್ಟಿನ್'ನಿಂದ 24 MH-60 ರೋಮಿಯೋ ಹೆಲಿಕಾಪ್ಟರ್ಗಳನ್ನು ಖರೀದಿ ಮಾಡಲು ಯುಎಸ್ ಜೊತೆಗೆ 2.4 ಬಿಲಿಯನ್ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದೆ. * ಪ್ರಸ್ತುತ ಈ MH-60 ರೋಮಿಯೋ ಹೆಲಿಕಾಪ್ಟರ್'ಗಳನ್ನೂ ವಿಮಾನವಾಹಕ ನೌಕೆಗಳು, ಕ್ರೂಸರ್ಗಳು, ಫ್ರಿಗೇಟ್ಗಳು ಹಾಗೂ ವಿಧ್ವಂಸಕಗಳಿಂದ ಕಾರ್ಯನಿರ್ವಹಿಸಲು ಇವುಗಳನ್ನು ಅಭಿವೃದ್ಧಿಪಡಿಸಲಾಗಿದೆ, ಇವುಗಳು ಮಲ್ಟಿ-ಮೋಡ್ ರಾಡಾರ್ ಹಾಗೂ ರಾತ್ರಿ ದೃಷ್ಟಿ ಸಾಧನಗಳನ್ನು ಒಳಗೊಂಡಿವೆ, ಹಡಗುಗಳು, ಜಲಾಂತರ್ಗಾಮಿ ನೌಕೆಗಳನ್ನು ಗುರಿಯಾಗಿಸಲು ಮತ್ತು ಸಮುದ್ರದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲು ಈ MH-60 ಹೆಲಿಕಾಪ್ಟರ್ಗಳನ್ನು ನಿರ್ಮಾಣ ಮಾಡಿದ್ದಾರೆ. * ಭಾರತೀಯ ನೌಕಾಪಡೆಯು ರೋಮಿಯೋ MH-60 ಹೊರತಾಗಿಯು ALH MK-3 ಎಂದು ಕರೆಯುವ 3 ಸ್ಥಳೀಯವಾಗಿ ನಿರ್ಮಿಸಲಾದ ಸುಧಾರಿತ ಬೆಳಕಿನ ಹೆಲಿಕಾಪ್ಟರ್ಗಳನ್ನು ಸಹ ಸೇರಿಸಿವೆ ಮತ್ತು ಈ ಹೆಲಿಕಾಪ್ಟರ್ಗಳನ್ನು ಕರಾವಳಿ ಭದ್ರತೆ ಮತ್ತು ಕಡಲ ವಿಚಕ್ಷಣೆಗಾಗಿ ಬಳಸಿಕೊಳ್ಳಾಗುತ್ತದೆ.