Job Description: * ಪ್ರಸ್ತುತ ಅಸ್ಸಾಂ ರಾಜ್ಯದ ಕ್ಯಾಬಿನೆಟ್ ಅಸೋಮ್ ರತ್ನ ಪ್ರಶಸ್ತಿಯನ್ನು ಸ್ಥಾಪಿಸಲು ನಿರ್ಧಾರವನ್ನು ಕೈಗೊಂಡಿದೆ. * ಅಸ್ಸಾಂ'ನ ಈ ಅಸೋಮ್ ರತ್ನ ಪ್ರಶಸ್ತಿ ಪ್ರಶಸ್ತಿಯನ್ನು ಪ್ರತಿವರ್ಷ ಒಬ್ಬ ವ್ಯಕ್ತಿಗೆ ನೀಡಲಾಗುತ್ತದೆ, ಅದು ಆ ವ್ಯಕ್ತಿಯು ಸಮಾಜಕ್ಕೆ ನೀಡಿದ ಮಹತ್ವದ ಕೊಡುಗೆಗಳನ್ನೂ ಪರಿಗಣಿಸಿ ನೀಡಲಾಗಿತ್ತದೆ ಎಂದು ತಿಳಿಸಲಾಗಿದೆ. * ಇದೇ ರೀತಿ ಅಸ್ಸಾಂ ರಾಜ್ಯವು ಅಸೋಮ್ ಬಿಭೂಷಣ್ ಪ್ರಶಸ್ತಿಯನ್ನು 3 ಜನರಿಗೆ, ಅಸ್ಸಾಂ ಭೂಷಣ್ ಪ್ರಶಸ್ತಿ 5 ಜನರಿಗೆ ಹಾಗೂ ಅಸೋಮ್ ಶ್ರೀ ಪ್ರಶಸ್ತಿ 10 ಜನರಿಗೆ ಪ್ರತಿ ವರ್ಷವು ಕ್ರಮವಾಗಿ ನೀಡಲಾಗುವುದು ಎಂದು ಅಸ್ಸಾಂ ಕ್ಯಾಬಿನೆಟ್ ತಿಳಿಸಿದೆ. * ಪ್ರಶಸ್ತಿಗಳು ಮತ್ತು ನಗದು ಬಹುಮಾನ: - ಅಸೋಮ್ ರತ್ನ ಪ್ರಶಸ್ತಿಗಾಗಿ 5 ಲಕ್ಷ ರೂ. - ಅಸೋಮ್ ಬಿಭೂಷಣ್ ಪ್ರಶಸ್ತಿಗೆ 3 ಲಕ್ಷ ರೂ. - ಅಸ್ಸಾಂ ಭೂಷಣ್ ಪ್ರಶಸ್ತಿಗೆ 2 ಲಕ್ಷ ರೂ - ಅಸೋಮ್ ಶ್ರೀ ಪ್ರಶಸ್ತಿಗೆ 1 ಲಕ್ಷ ರೂ. ಈ ಪ್ರಶಸ್ತಿಯನ್ನು ಪಡೆದಿರುವ ವ್ಯಕ್ತಿಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆ, ಅಸ್ಸಾಂ ರಾಜ್ಯದ ಬಸ್ಗಳಲ್ಲಿ ಉಚಿತ ಪ್ರಯಾಣ, ಅಸ್ಸಾಂ ಭವನದಲ್ಲಿ ಉಚಿತ ವಾಸ್ತವ್ಯ ಹಾಗೂ ಇತರೆ ಪ್ರಯೋಜನಗಳನ್ನು ನೀಡಲಾಗುತ್ತದೆ ಎಂದು ಅಸ್ಸಾಂ ರಾಜ್ಯ ಸರ್ಕಾರ ತಿಳಿಸಿದೆ. * ಸಾಹಿತಿ ಡಾ. ಹೋಮೆನ್ ಬೋರ್ಗೊಹೈನ್ ಅವರ ಜನ್ಮದಿನ ಡಿಸೆಂಬರ್. 7ರಂದು ಅವರ ಹೆಸರಿನಲ್ಲಿ ಸಾಹಿತ್ಯಕ್ಕ ಪಿಂಚಣಿಯನ್ನು ನೀಡಲಾಗುತ್ತದೆ. * ಕ್ರೀಡಾ ಪಿಂಚಣಿಯನ್ನು ಅರ್ಜುನ್ ಭೋಗೇಶ್ವರ ಬರುವಾ ಅವರ ಜನ್ಮದಿನ ಸೆಪ್ಟೆಂಬರ್ 3 ರಂದು ನೀಡಲಾಗುತ್ತದೆ. * ಇದೇ ರೀತಿ ಪ್ರತಿವರ್ಷವು ಕಲಾವಿದ ಪ್ರಶಸ್ತಿಯನ್ನು ಜನವರಿ 17ರಂದು ನೀಡಲಾಗುತ್ತದೆ ಎಂದು ಅಸ್ಸಾಂ ಸರ್ಕಾರವು ತಿಳಿಸಿದೆ.