Job Description: * ಭಾರತ ಫುಟ್ಬಾಲ್ ತಂಡವು ವಿಶ್ವಕಪ್ ಮತ್ತು ಏಷ್ಯಾಕಪ್ ಫುಟ್ಬಾಲ್ ಅರ್ಹತಾ ಟೂರ್ನಿಯಲ್ಲಿ ಸತತವಾಗಿ 6ಪಂದ್ಯಗಳಲ್ಲಿ ಸೋಲನ್ನು ಕಂಡಿದೆ ಇದಾದ ನಂತರ ಭಾರತ ಪುಟ್ಬಾಲ್ ತಂಡವು ಬಾಂಗ್ಲಾ ವಿರುದ್ಧ ಮೊದಲ ಜಯ ಕಂಡಿದೆ. * ಪ್ರಸ್ತುತ ಈ ಭಾರತ ಮತ್ತು ಬಾಂಗ್ಲಾ ತಂಡಗಳ ಪಂದ್ಯವು ಅಲ್ ಸದ್ ಕ್ರೀಡಾಂಗಣದಲ್ಲಿ ನಡೆಯಿತು, ಭಾರತ ತಂಡದ ನಾಯಕ ಸುನಿಲ್ ಚೆಟ್ರಿ ಅವರು 2 ಗೋಲುಗಳನ್ನು ಗಳಿಸಿದರು, ಭಾರತ ತಂಡವು 2-0 ಅಂತರದಲ್ಲಿ ಜಯ ಸಾಧಿಸಿತು. * ಪ್ರಸ್ತುತ ಭಾರತ ಪುಟ್ಬಾಲ್ ತಂಡವು ವಿಶ್ವ ರ್ಯಾಂಕಿಂಗ್'ನಲ್ಲಿ 105ನೇ ಸ್ಥಾನದಲ್ಲಿದೆ ಅದೇ ರೀತಿ ಬಾಂಗ್ಲಾ ತಂಡವು 184ನೇ ಸ್ಥಾನದಲ್ಲಿದೆ. * ಭಾರತ ತಂಡವು ಈಗಾಗಲೇ ವಿಶ್ವಕಪ್ ಅರ್ಹತೆಯಿಂದ ಹೊರ ನಡೆದಿದೆ, ಸದ್ಯ ಈ ಗೆಲುವಿನಿಂದ ಏಷ್ಯಾಕಪ್ ಟೂರ್ನಿಗೆ ಅರ್ಹತೆಯನ್ನು'ಗಳಿಸುವ 3ನೇ ಸುತ್ತಿನ ಪಂದ್ಯಗಳಲ್ಲಿ ಸ್ಪರ್ಧಿಸುವ ಅವಕಾಶವನ್ನು ಪಡೆದುಕೊಂಡಿದೆ. * ಭಾರತ ಪುಟ್ಬಾಲ್ ತಂಡವು ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಆರು ವರ್ಷಗಳ ನಂತರ ಮೊದಲ ಜಯ ಸಾಧಿಸಿದೆ, ಭಾರತ ತಂಡವು ವಿದೇಶದಲ್ಲಿ ಸುಮಾರು 20 ವರ್ಷಗಳ ನಂತರದ ಮೊದಲ ಜಯವಾಗಿದೆ, ಈ ಹಿಂದೆ 2015ರ ನವೆಂಬರ್ನಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಗುವಾಮ್ ಎದುರು 1-0 ಅಂತರದಲ್ಲಿ ಭಾರತ ಜಯ ಗಳಿಸಿತ್ತು. * ಅತೀ ಹೆಚ್ಚು ಗೋಲು ಗಳಿಸಿರುವವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಪೋರ್ಚುಗಲ್ನ ಕ್ರಿಸ್ಟಿಯಾನೊ ರೊನಾಲ್ಡೊ 103 ಗೋಲುಗಳನ್ನೂ ಗಳಿಸಿದ್ದಾರೆ * ಭಾರತದ ಸುನಿಲ್ ಚೆಟ್ರಿ ಅವರು 74 ಗೋಲುಗಳನ್ನೂಗಳಿಸಿ 2ನೇ ಸ್ಥಾನವನ್ನು ಪಡೆದಿದ್ದಾರೆ. * ಯುನೈಟೆಡ್ ಅರಬ್ ಎಮಿರೇಟ್ಸ್ನ ಅಲಿ ಮಬ್ಖೌತ್ 73 ಗೋಲುಗಳನ್ನೂ ಗಳಿಸಿ 3ನೇ ಸ್ಥಾನದಲ್ಲಿದ್ದಾರೆ.