Job Description: * ಪ್ರಸ್ತುತ ದಕ್ಷಿಣ ಆಫ್ರಿಕಾ ನ್ಯಾಯಾಲಯವು ಮಹಾತ್ಮ ಗಾಂಧೀಜಿ ಅವರ ಮರಿ ಮೊಮ್ಮಗಳಾಗಿರುವ 'ಆಶಿಲ್ ಲತಾ ರಾಮ್ಗೋಬಿನ್' ಅವರಿಗೆ ಹಣಕಾಸು ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ. * ದಕ್ಷಿಣ ಆಫ್ರಿಕಾದ ಡರ್ಬನ್ ವಾಣಿಜ್ಯ ವ್ಯಾಜ್ಯಗಳ ವಿಶೇಷ ನ್ಯಾಯಾಲಯ ಆಶಿಲ್ ಲತಾ ಅವರಿಗೆ ಶಿಕ್ಷೆ ವಿಧಿಸಿ ತೀರ್ಪುನ್ನು ಪ್ರಕಟಿಸಿದೆ, ಇದರಜೊತೆಗೆ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಾಲಾವಕಾಶವನ್ನುಕೂಡ ದಕ್ಷಿಣ ಆಫ್ರಿಕಾ ನ್ಯಾಯಾಲಯವು ನಿರಾಕರಿಸಿದೆ. * ಗಾಂಧೀಜಿ ಅವರ ಮರಿ ಮೊಮ್ಮಗಳಾಗಿರುವ 'ಆಶಿಲ್ ಲತಾ ರಾಮ್ಗೋಬಿನ್' ಅವರ ಮೇಲೆ 2015ರಲ್ಲಿ ಕೇಸ್ ದಾಖಲಾಗಿತ್ತು, ಪ್ರಸ್ತುತ ಲತಾ ಅವರು ಭಾರತದಿಂದ ದಕ್ಷಿಣ ಆಫ್ರಿಕಾಗೆ ಆಮದು ಮಾಡಿಕೊಳ್ಳುತ್ತಿರುವ ವಸ್ತುಗಳ ಕಸ್ಟಂ ಸುಂಕಕ್ಕಾಗಿ ದಕ್ಷಿಣ ಆಫ್ರಿಕಾದ ಉದ್ಯಮಿ ಹಾಗೂ ನ್ಯೂ ಆಫ್ರಿಕಾ ಅಲೈಯನ್ಸ್ ಕಂಪನಿ ನಿರ್ದೇಶಕರಾಗಿದ್ದ ಎಸ್.ಆರ್.ಮಹಾರಾಜ್ ಅವರಿಗೆ 6 ದಶಲಕ್ಷ ಆಫ್ರಿಕನ್ ರಾಂಡ್ (ಸುಮಾರು 3.22 ಕೋಟಿ ರೂ.) ಹಣ ಕೊಡದೆ ವಂಚಿಸಿದಕ್ಕಾಗಿ ಕೇಸ್ ದಾಖಲಾಗಿತ್ತು. * ರಾಷ್ಟ್ರೀಯ ಪ್ರಾಸಿಕ್ಯೂಟಿಂಗ್ ಪ್ರಾಧಿಕಾರ ಬ್ರಿಗೇಡಿಯರ್ ಹಂಗ್ವಾನಿ ಮುಲ್ವಾಡಿ ಅವರು ನೀಡಿರುವ ಮಾಹಿತಿಯ ಪ್ರಕಾರ ಈ ಹಿಂದೆ ಲತಾ ಅವರು 2015ರ ಆಗಸ್ಟ್ನಲ್ಲಿ ಭಾರತದಿಂದ 3 ಕಂಟೇನರ್ ಲೆನಿನ್ ಬಟ್ಟೆಯನ್ನು ದ.ಆ. ನೆಟ್ಕೇರ್ ಆಸ್ಪತ್ರೆಯ ಸಮೂಹ ಸಂಸ್ಥೆಗಳಿಗೆ ನೀಡುವ ಸಲುವಾಗಿ ಆಮದು ಮಾಡಿಕೊಳ್ಳುತ್ತಿದ್ದೇನೆ ಎಂದು ತೋರಿಸಲು ನಕಲಿ ದಾಖಲೆ ಸೃಷ್ಟಿಸಿ ನ್ಯೂ ಅಲೈಯನ್ಸ್ ಕಂಪನಿಯಿಂದ 6.2 ದಶಲಕ್ಷ ರಾಂಡ್ (ಹಣ) ಪಡೆದಿದ್ದರು ಎಂದು ತಿಳಿಸಿದ್ದಾರೆ.