Job Description: * ಪ್ರಸ್ತುತ ವಿಶ್ವದ ಶ್ರೀಮಂತ ವ್ಯಕ್ತಿಯಾಗಿರುವ ಅಮೆಜಾನ್ ಸಂಸ್ಥಾಪಕ ಹಾಗೂ CEO ಜೆಫ್ ಬೇಜೋಸ್ ಮುಂಬರುವ ಜುಲೈ 20ರಂದು ಬಾಹ್ಯಾಕಾಶಕ್ಕೆ ಹಾರಲಿದ್ದಾರೆ ಎಂದು ತಿಳಿದು ಬಂದಿದೆ. * "ಬ್ಲೂ ಒರಿಜಿನ್"ನ ಶೆಪರ್ಡ್ ಬಾಹ್ಯಾಕಾಶ ನೌಕೆಯ ಮೂಲಕ ಮೊದಲ ಮಾನವ ಬಾಹ್ಯಾಕಾಶ ಹಾರಾಟದ ಮಿಷನ್ನಲ್ಲಿ ಜೆಫ್ ಬೇಜೋಸ್ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳಸಲಿದ್ದಾರೆ, ಪ್ರಸ್ತುತ ಈ ಬ್ಲೂ ಒರಿಜಿನ್' ಬಾಹ್ಯಾಕಾಶ ಪರಿಶೋಧಾನಾ ಸಂಸ್ಥೆಯಾಗಿದೆ. * ಅಮೆಜಾನ್ ಸಂಸ್ಥಾಪಕ ಜೆಫ್ ಬೇಜೋಸ್ ಅವರು 5 ವರ್ಷದ ವಯಸ್ಸಿನ ಬಾಲ್ಯದಲ್ಲಿಯಿಯೇ ಬಾಹ್ಯಾಕಾಶಕ್ಕೆ ಪ್ರಯಾಣಿಸುವ ಕನಸು ಕಂಡಿದ್ದೆ ಇದೀಗ ಈ ಕನಸು ಜುಲೈ 20 ರಂದು ಈಡೇರಲಿದೆ ಎಂದು ತಿಳಿಸಿದ್ದಾರೆ, ಸದ್ಯ ನಾನು ನನ್ನ ಸಹೋದರನ ಜೊತೆಗೆ ಪ್ರಯಾಣ ಬೆಳಸಲಿದ್ದೇನೆ ಎಂದು ಜೆಫ್ ಬೇಜೋಸ್ ಅವರು ಇನ್ಸ್ಟಾಗ್ರಾಮ್'ನಲ್ಲಿ ಪೋಸ್ಟ್ ಮಾಡುವ ಮೂಲಕ ವಿಷಯವನ್ನು ಹಂಚಿಕೊಂಡಿದ್ದಾರೆ. * ಜುಲೈ. 20ರಂದು ಟೆಕ್ಸಾಸ್'ನಿಂದ ಬಾಹ್ಯಾಕಾಶಕ್ಕೆ ನೌಕೆ ಉಡಾವಣೆ ಆಗಲಿದೆ ಎಂದು ತಿಳಿದು ಬಂದಿದೆ.