Job Description: * ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಲಸಿಕೆ ವಿತರಣೆಗಾಗಿ ಮಹತ್ವದ ಹೆಜ್ಜೆಯನ್ನು ಇಟ್ಟಿದ್ದಾರೆ, ಅದುವೇ 18 ವರ್ಷ ಮೇಲ್ಪಟ್ಟ ಎಲ್ಲ ಜನರಿಗೆ ಜೂನ್ 21ರ ನಂತರ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ. * ಪ್ರಸ್ತುತ ದೇಶದಲ್ಲಿನ ಎಲ್ಲ ರಾಜ್ಯಗಳಿಗೆ ಕೇಂದ್ರ ಸರ್ಕಾರವೇ ಉಚಿತವಾಗಿ ಲಸಿಕೆಯನ್ನು ವಿತರಿಸಲಿದೆ, ಮತ್ತು ಯಾವುದೇ ರಾಜ್ಯಗಳು ಲಸಿಕೆಗಾಗಿ ಕೇಂದ್ರಕ್ಕೆ ಹಣ ನೀಡಬೇಕಿಲ್ಲ ಎಂದು ತಿಳಿಸಿದ್ದಾರೆ. * ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನ, ಈ ದಿನದಿಂದ 18 ವರ್ಷ ಮೇಲ್ಪಟ್ಟ ಎಲ್ಲ ಜನರಿಗೆ ಉಚಿತವಾಗಿಯೇ ಲಸಿಕೆಯನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದಿದ್ದಾರೆ. * ಪ್ರಸ್ತುತ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ಪಡೆಯಲು ಬಯಸಿದವರಿಗೆ ಲಸಿಕೆ ಲಭ್ಯವಾಗಲಿದೆ, ಆದರೆ ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಸೇವಾಶುಲ್ಕ150 ರೂ. ನೀಡಬೇಕು ಇದರ ಜೊತೆಯಲ್ಲಿ ಬಡಜನರಿಗೆ ನೀಡುತ್ತಿದ್ದ ಉಚಿತ ಪಡಿತರವನ್ನು ದೀಪಾವಳಿವರೆಗೂ ನೀಡಲಾಗುತ್ತದೆ ಎಂದು ಪ್ರಧಾನಿ ಮೋದಿ ಅವರು ಭಾರತೀಯ ಜನತೆಗೆ ತಿಳಿಸಿದ್ದಾರೆ.