Job Description: * ಪ್ರಧಾನಿ ನರೇಂದ್ರ ಮೋದಿ ಅವರು 24ನೇ ಬಿಮ್ಸ್ಟೆಕ್ ದಿನದ ಶುಭಾಶಯಗಳನ್ನು ತಿಳಿಸಿದರು. * ಬಿಮ್ಸ್ಟೆಕ್ (BIMSTEC) ಎಂಬುವದು 'ಬೇ-ಬಂಗಾಳ ಉಪಕ್ರಮಕ್ಕಾಗಿ ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರದ' ಸಂಕ್ಷಿಪ್ತ ರೂಪವಾಗಿದೆ, ಇದು1997ರ ಜೂನ್. 6ರಂದು ಬ್ಯಾಂಕಾಕ್ನಲ್ಲಿ BIST-EC (ಬಾಂಗ್ಲಾದೇಶ, ಭಾರತ, ಶ್ರೀಲಂಕಾ ಮತ್ತು ಥೈಲ್ಯಾಂಡ್ ಆರ್ಥಿಕ ಸಹಕಾರ) ಹೆಸರಿನಲ್ಲಿ ಸ್ಥಾಪಿಸಲಾದ ಪ್ರಾದೇಶಿಕ ಬಹುಪಕ್ಷೀಯ ಸಂಘಟನೆಯಾಗಿದೆ, ಮತ್ತೇ 1997ರಲ್ಲಿ ಈ ಸಂಘಟಣೆಗೆ ಮ್ಯಾನ್ಮಾರ್'ನ್ನು ಸೇರಿಸಲಾಗಿದೆ, ನಂತರದ ದಿನಗಳಲ್ಲಿ ಈ ಗುಂಪನ್ನು BIMST-EC (ಬಾಂಗ್ಲಾದೇಶ, ಭಾರತ, ಮ್ಯಾನ್ಮಾರ್, ಶ್ರೀಲಂಕಾ ಮತ್ತು ಥೈಲ್ಯಾಂಡ್ ಆರ್ಥಿಕ ಸಹಕಾರ) ಎಂದು ಮರುನಾಮಕರಣ ಮಾಡಲಾಯಿತು, ನಂತರ 2004ರಲ್ಲಿ ನೇಪಾಳ ಮತ್ತು ಭೂತಾನ್ ಪೂರ್ಣ ಸದಸ್ಯರಾದ ನಂತರ, ಬಿಮ್ಸ್ಟೆಕ್'ನ್ನು ಅದರ ಪ್ರಸ್ತುತ ಸ್ವರೂಪಕ್ಕೆ ಮರುನಾಮಕರಣ ಮಾಡಲಾಯಿತು. * ಪ್ರಸ್ತುತ BIMSTEC 7ಸದಸ್ಯರು ಬಂಗಾಳಕೊಲ್ಲಿಯ ಕರಾವಳಿಯ ಸುತ್ತಮುತ್ತಲಿನ ಪ್ರದೇಶಗಳಾಗಿವೆ, ಪ್ರಸ್ತುತ ದಕ್ಷಿಣ ಏಷ್ಯಾದ 5ರಾಷ್ಟ್ರಗಳಾಗಿರುವ ಬಾಂಗ್ಲಾದೇಶ, ಭೂತಾನ್, ಭಾರತ, ನೇಪಾಳ ಮತ್ತು ಶ್ರೀಲಂಕಾ, ಹಾಗೂ ಆಗ್ನೇಯ ಏಷ್ಯಾದ 2 ದೇಶಗಳು ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ ರಾಷ್ಟ್ರಗಳು ಕೂಡಿವೆ. * ಪ್ರಸ್ತುತ ಗ್ರೇಟ್ ಹಿಮಾಲಯ ಹಾಗೂ ಬಂಗಾಳಕೊಲ್ಲಿಯ ಪರಿಸರ ವಿಜ್ಞಾನ ಇದರ ಹೊರತಾಗಿ ಬಿಮ್ಸ್ಟೆಕ್ ದಕ್ಷಿಣ ಮತ್ತು ಆಗ್ನೇಯ ಏಷ್ಯಾವನ್ನು ಸಂಪರ್ಕಿಸುವದು ಬಿಮ್ಸ್ಟೀಕ್ ಗುರಿಯಾಗಿದೆ, ಇದರ ಜೊತೆಗೆ ತ್ವರಿತ ಆರ್ಥಿಕ ಅಭಿವೃದ್ಧಿಗೆ ಅನುವು ಮಾಡಿಕೊಡುವ ವಾತಾವರಣವನ್ನು ಸೃಷ್ಟಿಸುವ ಮತ್ತು ಸಾಮಾಜಿಕ ಪ್ರಗತಿಯನ್ನು ಉತ್ತಮಗೊಳಿಸುವ ಉದ್ದೇಶದಿಂದಾಗಿ ಇದನ್ನು ಸ್ಥಾಪನೆ ಮಾಡಲಾಗಿದೆ.