Job Description: * ಪ್ರಸ್ತುತ ಕೇಂದ್ರ ಸರ್ಕಾರವು ಸ್ಪುಟ್ನಿಕ್-ವಿ ಲಸಿಕೆ ಉತ್ಪಾದಿಸಲು ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿರುವ ಸಿರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಒಪ್ಪಿಗೆಯನ್ನು ನೀಡಿದೆ. * ಪ್ರಸ್ತುತ ಸಿರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕೋವಿಶೀಲ್ಡ್ ಲಸಿಕೆಯನ್ನು ಉತ್ಪಾದಿಸುತ್ತಿದೆ, ಇದೀಗ ಸ್ಪುಟ್ನಿಕ್-ವಿ ಲಸಿಕೆಯನ್ನು ಕೂಡ ಉತ್ಪಾದಣೆ ಮಾಡಲು ಸಿದ್ಧವಾಗಿದೆ ಎಂದು ತಿಳಿದು ಬಂದಿದೆ. * ಸಿರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯು ರಷ್ಯಾದ ದೇಶದ ಕೋವಿಡ್-19 ಲಸಿಕೆಯಾಗಿರುವ ಸ್ಪುಟ್ನಿಕ್-ವಿ ಲಸಿಕೆ ತಯಾರಿಸಲು ಭಾರತೀಯ ಔಷಧ ನಿಯಂತ್ರಣ ಮಹಾ ನಿರ್ದೇಶನಾಲಯಕ್ಕೆ ಅರ್ಜಿ ಸಲ್ಲಿಸಿತ್ತು, ಇದೀಗ ಈ ಅರ್ಜಿಗೆ ಹಸಿರು ನಿಶಾನೆಯನ್ನು ತೋರಿದೆ ಎನ್ನಲಾಗಿದೆ.