Job Description: * ಭಾರತದಲ್ಲಿ 2025ರ ವೇಳೆಗೆ ಇಂಟರ್ನೆಟ್ನ ಸಕ್ರಿಯ ಬಳಕೆದಾರರ ಪ್ರಮಾಣ ಶೇ 45ರಷ್ಟು ಹೆಚ್ಚಳವಾಗಿ 90 ಕೋಟಿ ತಲುಪಲಿದೆ ಎಂದು ಐಎಎಂಎಐ-ಕಾಂಟರ್ ಕ್ಯೂಬ್ ವರದಿ ತಿಳಿಸಿದೆ. * 2025ನೇ ವರ್ಷಕ್ಕೆ ಹೋಲಿಸಿದರೆ ನಗರ ಪ್ರದೇಶಗಳಿಗಿಂತ ಅತೀ ಹೆಚ್ಚು ಇಂಟರ್ನೆಟ್ ಬಳಕೆದಾರರು ಗ್ರಾಮೀಣ ಪ್ರದೇಶಗಳಲ್ಲಿ ಇರಲಿದ್ದಾರೆ. * ಭಾರತೀಯ ಅಂತರ್ಜಾಲ ಮತ್ತು ಮೊಬೈಲ್ ಸಂಘಟನೆಯು ನೀಡಿರುವ ವರದಿಯ ಪ್ರಕಾರ ದೇಶದಲ್ಲಿ ಡಿಜಿಟಲ್ ಮೂಲಸೌಕರ್ಯ ಬಲಪಡಿಸುವ ಅಗತ್ಯ ಮತ್ತು ದತ್ತಾಂಶಗಳುನ್ನು ಸೂಚಿಸಲಿವೆ ಎಂದು ತಿಳಿಸಿದೆ. * ಇಂಟರ್ನೆಟ್ ಬಳೆಕೆದಾರರ ಬೆಳವಣಿಗೆಯು 2020ನೇ ವರ್ಷದ ಪ್ರಕಾರ ನಗರ ಪ್ರದೇಶದಲ್ಲಿ ಶೇ.4ರಷ್ಟು ಹಾಗೂ ಗ್ರಾಮೀಣ ಭಾಗಗಳಲ್ಲಿ ಶೇ.13ರಷ್ಟಿದೆ ಎಂದು ತಿಳಿದಿದೆ. * ಪ್ರಸ್ತುತ ಶೇ.67ರಷ್ಟು ನಗರದ ಜನಸಂಖ್ಯೆಯ ಮತ್ತು ಶೇ.31ರಷ್ಟು ಗ್ರಾಮೀಣ ಭಾಗದ ಜನರು ಇಂಟರ್ನೆಟ್ ಬಳಸುತ್ತಿದ್ದಾರೆ ಎಂದು ಮಾಹಿತಿ ಬಂದಿದೆ.