Job Description: * ನೀತಿ ಆಯೋಗವು 2020-21ನೇ ಸಾಲಿನ ಸುಸ್ಥಿರ ಅಭಿವೃದ್ಧಿ ಸೂಚ್ಯಂಕದ ವರದಿಯನ್ನು ಪ್ರಕಟಿಸಿದೆ, ಈ ಸೂಚ್ಯಂಕದಲ್ಲಿ ಕೇರಳ ರಾಜ್ಯವು ಅಗ್ರ ಸ್ಥಾನ ಪಡೆದಿದೆ. * ಪ್ರಸ್ತುತ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರು ಭಾರತದ ಸುಸ್ಥಿರ ಅಭಿವೃದ್ಧಿ ಗುರಿಗಳು (sustainable development goals - SDG) ಸೂಚ್ಯಂಕದ 3ನೇ ಆವೃತ್ತಿಯನ್ನು ಘೋಷಣೆ ಮಾಡಿದ್ದಾರೆ. * ಈ ಸುಸ್ಥಿರ ಅಭಿವೃದ್ಧಿ ಸೂಚ್ಯಂಕ ಗುರಿಯನ್ನು 2018ರ ಡಿಸೆಂಬರ್ ತಿಂಗಳಿಂದ ಪ್ರಾರಂಭಿಸಲಾಗಿದೆ, ಈ ಸೂಚ್ಯಂಕದಿಂದ ದೇಶದಲ್ಲಿನ ಪ್ರಗತಿಯ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ ಎಂದು ನೀತಿ ಆಯೋಗ ತಿಳಿಸಿದೆ. * ದೇಶದಲ್ಲಿ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆ ಕೇರಳ ರಾಜ್ಯವು 75 ಅಂಕಗಳನ್ನು ಪಡೆದು ಪ್ರಥಮ ಸ್ಥಾನದಲ್ಲಿದೆ. * ಹಿಮಾಚಲ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳು 74 ಅಂಕಗಳನ್ನು ಪಡೆದು 2ನೇ ಸ್ಥಾನವನ್ನು ಪಡೆದುಕೊಂಡಿವೆ. * ಆಂಧ್ರ ಪ್ರದೇಶ, ಗೋವಾ, ಕರ್ನಾಟಕ ಮತ್ತು ಉತ್ತರಖಾಂಡ ರಾಜ್ಯಗಳು 72 ಅಂಕಗಳನ್ನು ಪಡೆದು 3ನೇ ಸ್ಥಾನವನ್ನು ಪಡೆದುಕೊಂಡಿವೆ. * ಬಿಹಾರ, ಜಾರ್ಖಂಡ್ ಹಾಗೂ ಅಸ್ಸಾಂ ರಾಜ್ಯಗಳು ಅತಿ ಕಳಪೆ ಸ್ಥಾನ ಪಡೆದುಕೊಂಡಿವೆ. * 2020-21ನೇ ಸಾಲಿನ ಸುಸ್ಥಿರ ಅಭಿವೃದ್ಧಿ ಸೂಚ್ಯಂಕದಲ್ಲಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ಚಂಡೀಗಢ 79 ಅಂಕ ಪಡೆದು ಮೊದಲ ಸ್ಥಾನದಲ್ಲಿದೆ, ನಂತರ ದೆಹಲಿ 68 ಅಂಕ ಪಡೆದು 2ನೇ ಸ್ಥಾನದಲ್ಲಿದೆ.