Job Description: * ಪ್ರಸ್ತುತ 7 ವರ್ಷಗಳ ಮಾನ್ಯತೆಯ ಅವಧಿಯನ್ನು ಹೊಂದಿರುವ ಶಿಕ್ಷಕರ ರಾಷ್ಟ್ರೀಯ ಅರ್ಹತಾ ಪರೀಕ್ಷೆಯ (TET) ಪ್ರಮಾಣಪತ್ರವು ಇದೀಗ ಜೀವಿತಾ ಅವಧಿಯವೆರೆಗೆ ವಿಸ್ತರಣೆ ಮಾಡಿ ಕೇಂದ್ರ ಶಿಕ್ಷಣ ಇಲಾಖೆಯು ಆದೇಶವನ್ನು ಹೊರಡಿಸಿದೆ, ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಕ್ರಿಯಾಲ್ ಅವರು ಟ್ವಿಟ ಮೂಲಕ ಮಾಹಿತಿಯನ್ನು ನೀಡಿದ್ದಾರೆ. * ಈ TET ಪರೀಕ್ಷೆಯು ದೇಶದಲ್ಲಿನ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಿಗೆ ಶಿಕ್ಷಕರಾಗಲು ಕನಿಷ್ಠ ಮಟ್ಟದ ಅಹರ್ತಾ ಪರೀಕ್ಷೆ ಇದಾಗಿದೆ. * ಈ TET ನಿಯಮ 2011ರಿಂದ ಅನ್ವಯ ವಾಗಲಿದೆ, ಅಂದರೆ 2011ಕ್ಕೆ ಯಾರೆಲ್ಲ ಟಿಇಟಿ ಮಾನ್ಯತೆಯನ್ನು ಕಳೆದುಕೊಂಡಿದ್ದಾರೆ ಅಂಥವರಿಗೂ ಇನ್ನು ಮುಂದೆ ಶಿಕ್ಷಕ ಕೆಲಸಕ್ಕೆ ಅರ್ಹ (Eligible) ಆಗಿರುತ್ತಾರೆ ಎಂದು ಕೇಂದ್ರ ಶಿಕ್ಷಣ ಸಚಿವರು ಹೇಳಿದ್ದಾರೆ. * ಎಲ್ಲಾರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಶಿಕ್ಷಣ ಇಲಾಖೆಯು ಸೂಚನೆ ನೀಡಿದೆ, ಮತ್ತು ಹೊಸದಾಗಿ TET ಮಾನ್ಯತೆಯ ಪ್ರಮಾಣಪತ್ರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ.