Job Description: * ಪ್ರಸ್ತುತ ಚೀನಾ ದೇಶವು ಹೊಸ ತಲೆಮಾರಿನ ಹವಾಮಾನ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ, ಪ್ರಸ್ತುತ ಹವಾಮಾನ ವಿಶ್ಲೇಷಣೆ ಜೊತೆಗೆ ಪರಿಸರ ವಿಪತ್ತುಗಳ ಮೇಲ್ವಿಚಾರಣೆಗಾಗಿ ಈ ಉಪಗ್ರಹವನ್ನು ಉಪಯೋಗಿಸಲಾಗುತ್ತದೆ ಎಂದು ತಿಳಿಸಿದೆ. * ಚೀನಾ ದೇಶದ ಸಿಚುವಾನ್ ಪ್ರಾಂತ್ಯದ ಕ್ಸಿಚಾಂಗ್ ಉಪಗ್ರಹ ಉಡಾವಣಾ ಕೇಂದ್ರದಿಂದ ಬೆಳಗಿನಜಾವ ಲಾಂಗ್ ಮಾರ್ಚ್ -3 ಬಿ ರಾಕೆಟ್ ಬಳಸಿ ಫೆಂಗ್ಯುನ್ -4 ಬಿ (Fengyun-4B) ಉಪಗ್ರಹ ಉಡಾವಣೆ ಮಾಡಲಾಗಿದೆ ಎಂದು ಅಲ್ಲಿನ ಸರ್ಕಾರಿ ಸಿನ್ಹುವಾ ಸುದ್ದಿವಾಹಿನಿ ಮಾಹಿತಿಯನ್ನು ನೀಡಿದೆ. * ಈ ಹವಾಮಾನ 'Fengyun-4B' ಉಪಗ್ರಹವು ಕೃಷಿ, ಪರಿಸರ ಸಂರಕ್ಷಣೆ, ಸಾಗರ ನಿರ್ವಹಣೆ ಹೀಗೆ ಹಲವು ಪ್ರದೇಶಗಳ ಮಾಹಿತಿ ಮತ್ತು ಭದ್ರತಾ ಸೇವೆಯನ್ನು ನೀಡಲು ಈ ಉಪಗ್ರಹ ಸಹಾಯಕಾರಿಯಾಗಲಿದೆ ಎಂದು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ ಪತ್ರಿಕಾ ಪ್ರಕಟಣೆಯಲ್ಲಿ ವರದಿಯನ್ನು ನೀಡಿದೆ. * ಪ್ರಸ್ತುತ ಏಷ್ಯಾ, ಮಧ್ಯ ಪೆಸಿಫಿಕ್ ಮಹಾಸಾಗರ ಮತ್ತು ಹಿಂದೂ ಮಹಾಸಾಗರ ಪ್ರದೇಶಗಳ ವೀಕ್ಷಣಾ ವ್ಯಾಪ್ತಿಯುನ್ನುಈ 'Fengyun-4B' ಉಪಗ್ರಹವು ಹೊಂದಿದೆ, ಇದರಿಂದಾಗಿ ಚೀನಾ ದೇಶಕ್ಕೆ ಚಂಡಮಾರುತ ಹಾಗೂ ಪರಿಸರ ವಿಪತ್ತುಗಳ ಮಾಹಿತಿ ಲಭಿಸಲಿದೆ ಎಂದು ಚೀನಾ ತಿಳಿಸಿದೆ.