Job Description: * ಭಾರತವು ಹೊಸ ಫ್ಲೈಯಿಂಗ್ ಟ್ರೈನಿಂಗ್ ಅಕಾಡೆಮಿಗಳನ್ನೂ ವಿಮಾನ ನಿಲ್ದಾಣ ಪ್ರಾಧಿಕಾರದ (AAI) ಉದಾರೀಕೃತ ವೈಮಾನಿಕ ತರಬೇತಿ ಸಂಸ್ಥೆಯ, ಫ್ಲೈಯಿಂಗ್ ಟ್ರೈನಿಂಗ್ ಆರ್ಗನೈಸೇಶನ್ - (FTO) ನೀತಿ ಅಡಿಯಲ್ಲಿ ಪ್ರಾರಂಭಿಸಲಿದೆ. * ಪ್ರಸ್ತುತ ಭಾರತವು ಹೊಸ ಫ್ಲೈಯಿಂಗ್ ಟ್ರೈನಿಂಗ್ ಅಕಾಡೆಮಿಗಳುನ್ನು ಬೆಳಗಾವಿ, ಜಲಗಾಂವ್, ಕಲಬುರಗಿ, ಖಜುರಾಹೊ ಮತ್ತು ಲೀಲಬರಿ ಎಂಬಲ್ಲಿ ಸ್ಥಾಪನೆ ಮಾಡಲಿದೆ. * ಭಾರತವನ್ನು ಜಾಗತಿಕ ವೈಮಾನಿಕ ತರಬೇತಿ ಕೇಂದ್ರವನ್ನಾಗಿ ಮಾಡುವ ಉದ್ದೇಶವನ್ನು ಈ ಫ್ಲೈಯಿಂಗ್ ಟ್ರೈನಿಂಗ್ ಅಕಾಡೆಮಿಗಳು ಹೊಂದಿವೆ, ಇದರ ಜೊತೆಗೆ ಭಾರತೀಯ ವಿದ್ಯಾರ್ಥಿಗಳು ಕಲಿಕೆಗೆ ವಿದೇಶಿ ವೈಮಾನಿಕ ತರಬೇತಿ ಅಕಾಡೆಮಿಗಳಿಗೆ ಹೋಗುವುದನ್ನು ತಡೆಯಲು ಈ ಅಕಾಡೆಮಿಗಳು ಸಹಾಯಕಾರಿಯಾಗಲಿವೆ. * 2020ರ ನವೆಂಬರ್ನಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರವು (AAI) ಬಿಡ್ಗಳಿಗೆ ಆಹ್ವಾನನೀಡಿತ್ತು, ಪ್ರಸ್ತುತ ವಿಜೇತ ಬಿಡ್ಡುದಾರರಿಗೆ ಆದೇಶ ಪ್ರಮಾಣ ಪತ್ರಗಳನ್ನು ಇದೇ 2021ರ ಮೇ. 20ರಂದು ಹಸ್ತಾಂತರಿಸಲಾಗಿದೆ ಎಂದು AAI ತಿಳಿಸಿದೆ.