Job Description: * ಪ್ರಸ್ತುತ ಜಗತ್ತಿನಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಚೀನಾ, ಇದೀಗ ಚೀನಾ ದೇಶದಲ್ಲಿ ಇನ್ನು ಮುಂದೆ ಅಲ್ಲಿನ ದಂಪತಿಗಳು ಮೂರು ಮಕ್ಕಳನ್ನು ಹೊಂದಬಹುದುದಾಗಿದೆ ಎಂದು ಚೀನಾ ಅಧ್ಯಕ್ಷ ಜಿನ್ಪಿಂಗ್ ಅವರ ಸಮ್ಮುಖದಲ್ಲಿ ನಡೆದ ಚೀನಾ ಕಮ್ಯೂನಿಸ್ಟ್ ಪಕ್ಷದ ಪಾಲಿಟ್ಬ್ಯೂರೋ ಸಭೆಯಲ್ಲಿ ಈ ನಿರ್ಧಾರವನ್ನು ತಗೆದುಕೊಳ್ಳಲಾಗಿದೆ. * ಚೀನಾ ದೇಶದ ಸರಕಾರಿ ಮಾಧ್ಯಮ ಸಂಸ್ಥೆ ಕ್ಸಿನ್ಹುವಾ’ ಸುದ್ದಿವಾಹಿನಿ ವರದಿ ನೀಡಿರುವ ಪ್ರಕಾರ, ಪ್ರಸ್ತುತ ದೇಶದ ಜನಸಂಖ್ಯೆಯನ್ನು ಪುನರ್ ವ್ಯವಸ್ಥೆಗೊಳಿಸಲು ಹಲವು ಬೆಂಬಲ ಕ್ರಮಗಳನ್ನು ಜಾರಿ ಮಾಡಲಾಗುತ್ತಿದೆ, ಇದರೊಂದಿಗೆ ಇಲ್ಲಿನ ಹಿರಿಯ ನಾಗರಿಕರ ಯೋಗಕ್ಷೇಮ ಮತ್ತು ಜನರಲ್ಲಿ ಮಕ್ಕಳನ್ನು ಪಡೆಯುವ ಸಾಮರ್ಥ್ಯ ಕುಗ್ಗುತ್ತಿರುವ ಹಿನ್ನೆಲೆಯಲ್ಲಿಯಿಂದಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. * ಪ್ರಸ್ತುತ ಚೀನಾ ದೇಶವು ಇದೀಗ 1.4 ಶತಕೋಟಿ ಜನಸಂಖ್ಯೆ ಹೊಂದಿದೆ. * ಚೀನಾ ದೇಶವು 1980ರ ನಂತರ ಹೆಚ್ಚುತ್ತಿರುವ ಜನಸಂಖ್ಯೆ ನಿಯಂತ್ರಿಸಲು ಚೀನಾ ಸರಕಾರವು ಇನ್ನು ಒಂದು ದಂಪತಿಗೆ ಒಂದೇ ಮಗು ಹೊಂದಿರಬೇಕು ಎಂಬ ನಿಯಮ ಜಾರಿಗೆ ತಂದಿತ್ತು, ಪ್ರಸ್ತುತ 2020ನೇ ವರ್ಷದ ಜನಗಣತಿ ಮಾಹಿತಿಯ ಪ್ರಕಾರ ಚೀನಾ ಜನಸಂಖ್ಯೆ ಶೇ.0.59ರಷ್ಟು ಮಾತ್ರ ಬೆಳವಣಿಗೆ ಕಂಡಿದೆ ಇದರಿಂದಾಗಿ ಇಲ್ಲಿನ ಜನರಿಗೆ ಮೂರು ಮಕ್ಕಳನ್ನು ಹೊಂದಲು ಚೀನಾ ಸರಕಾರವು ಅವಕಾಶ ನೀಡಿದೆ.