Job Description: * ಇದೀಗ 7 ಪ್ರಾದೇಶಿಕ ಭಾಷೆಗಳಲ್ಲಿ ಎಂಜಿನಿಯರಿಂಗ್(Engineering) ಶಿಕ್ಷಣ ನೀಡಲು ಪ್ರಸ್ತುತ ದೇಶದ ಕಾಲೇಜುಗಳಿಗೆ ಅಖೀಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಅನುಮತಿ ನೀಡಿದೆ, ಪ್ರಸ್ತುತ 2020-21ನೇ ಶೈಕ್ಷಣಿಕ ವರ್ಷದಿಂದ ಕನ್ನಡ, ಹಿಂದಿ, ಬಂಗಾಲಿ, ತೆಲುಗು, ತಮಿಳು, ಗುಜರಾತಿ, ಮಲಯಾಂ ಭಾಷೆಗಳಲ್ಲಿ ಈ ಕೋರ್ಸ್ ಮಾಡಲು ಅವಕಾಶ ನೀಡಲಾಗಿದೆ ಎಂದು AICTE ತಿಳಿಸಿದೆ. * AICTE ಅನುಮತಿ ನೀಡಿದ ಹಿನ್ನೆಲೆಯಿಂದಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU)ವು ಕನ್ನಡದಲ್ಲಿ ಎಂಜಿನಿಯರಿಂಗ್ ವಿಷಯಗಳನ್ನು ಬೋಧಿಸಲು ಪಠ್ಯಕ್ರಮ ಸಿದ್ಧಗೊಳಿಸುತ್ತಿದೆ, ಇದೀಗ VTU ವಿಷಯ ತಜ್ಞರ ಸಮಿತಿ ರಚನೆಯನ್ನು ಮಾಡಿದೆ ಸದ್ಯದಲ್ಲೇ ಕನ್ನಡ ಪಠ್ಯಕ್ರಮ ಸಿದ್ಧವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. * ತಾಂತ್ರಿಕ(Technical) ಕೋರ್ಸ್ಗಳ ಪಠ್ಯಕ್ರಮವು ಕನ್ನಡದಲ್ಲಿ ಲಭ್ಯವಾದರೆ ಗ್ರಾಮೀಣ ಪ್ರತಿಭೆ ಅಂದರೆ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಲಿದೆ, ಆದರೆ ತಾಂತ್ರಿಕ ಪದವಿ ಕನ್ನಡದಲ್ಲಿ ಪಡೆದರು ಕೂಡ ಪ್ರಾದೇಶಿಕ ಭಾಷೆಯ ಪಠ್ಯಕ್ರಮದ ಜೊತೆಗೆ ಜಾಗತಿಕವಾಗಿ ಅಗತ್ಯವಿರುವ ಭಾಷೆಯಲ್ಲೂ ಅಧ್ಯಯನ ಮಾಡುವದು ಅದರೊಂದಿಗೆ ವಿಷಯ ಜ್ಞಾನವನ್ನು ಪಡೆಯುವದು ಅತೀ ಮುಖ್ಯವಾಗಿದೆ ಎಂದು ತಾಂತ್ರಿಕ ವಿಷಯ ತಜ್ಞರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. * ಕೆಲವು ತಾಂತ್ರಿಕ ಪದಗಳ ತರ್ಜುಮೆ(ಭಾಷಾಂತರ ಅಥವಾ ಅನುವಾದ) ಕಷ್ಟ, ಕೆಲವು ಪದಗಳ ಅರ್ಥ ಅನರ್ಥ ಅಥವಾ ವ್ಯತ್ಯಾಸವಾದರೂ ಕಲಿಕೆಗೆ ಪರಿಪೂರ್ಣತೆ ಸಿಕ್ಕಂತೆ ಆಗುವದಿಲ್ಲ ಹೀಗಾಗಿ ಇಂಗ್ಲಿಷ್- ಕನ್ನಡ ತಾಂತ್ರಿಕ ನಿಘಂಟನ್ನು ತಯಾರಿಸಲಾಗುತ್ತಿದೆ ಎಂದು VTU ಕುಲಸಚಿವರಾಗಿರುವ ಡಾII ಎ.ಎಸ್. ದೇಶಪಾಂಡೆ ಮಾಹಿತಿ ನೀಡಿದ್ದಾರೆ, ಮತ್ತು ಇದರಿಂದ ತಾಂತ್ರಿಕ ವಿಷಯಗಳ ಕನ್ನಡ ಭಾಷಾಂತರಕ್ಕೆ ಈ ತಾಂತ್ರಿಕ ನಿಘಂಟು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ. * ಭಾಷಾಂತರಕ್ಕಾಗಿ AICTE ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಸಾಫ್ಟ್ವೇರ್ ಮೂಲಕ ಎಂಜಿನಿಯರಿಂಗ್ ಪಠ್ಯಕ್ರಮ ಅನುವಾದ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.